ಹೊಸದಿಗಂತ ವರದಿ ಬಳ್ಳಾರಿ:
ಬಳ್ಳಾರಿ: ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು, ಅನ್ನದಾತರ ಬವಣೆ ಹೇಳತೀರದಾಗಿದೆ, ಜನ, ಜಾನುವಾರುಗಳಿಗೆ ನೀರಿಲ್ಲ. ಹೀಗಿರುವಾಗ ಇದ್ಯಾವುದು ನಮಗೆ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಸಿ.ಎಂ.ಡಿ.ಕೆ.ಶಿವಕುಮಾರ್ ಮಾತ್ರ ಕಾಕ್ರೋಚ್ ಜೊತೆ, ಟೈಂಪಾಸ್ ಮಾಡ್ತಿದ್ದಾರೆ. ನಾಚಿಕೆಯಾಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ತಾಲೂಕಿನ ಸಿಡಿಗಿನಮೋಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಖಂಡಿಸಿ ದೆಹಲಿಯಲ್ಲಿ ಕಾಕ್ರೋಚ್ ನಡೆಸಿದ ಪ್ರತಿಭಟನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ರೀತಿಯ ನೆರವು ನೀಡಿದೆ. ಸುದ್ದಿ, ಜಮೊಟೊಗೆ ದುಡ್ಡು ಕೊಟ್ಟೂವರೆ ಇವರು ಎಂದು ವಾಗ್ದಾಳಿ ನಡೆಸಿದರು.
ತುಂಗಭದ್ರಾ ಜಲಾಶಯದಲ್ಲಿ 38 ಟಿಎಂಸಿ ನೀರು ಸಂಗ್ರಹವಿದ್ದರೂ ಸರ್ಕಾರ ನೀರು ಬಿಡ್ತಿಲ್ಲ, ನಮ್ಮ ಅವಧಿಯಲ್ಲಿ ಪರಿಸ್ಥಿತಿ ಎದುರಾದಾಗ ಇದಕ್ಕಿಂತ ಕಡಿಮೆ ನೀರಿದ್ದರೂ ನಾವು ಬಿಡುಗಡೆ ಮಾಡಿದ್ದೆವು. ಸರ್ಕಾರದ ಕ್ರಮ ಖಂಡಿಸಿ ಕೊಪ್ಪಳ ಜಿಲ್ಲೆಯ ಪವಿತ್ರ ಸನ್ನಿಧಾನ ಶ್ರೀ ಅಂಜನಾದ್ರಿ ಕ್ಷೇತ್ರದಿಂದ ನಾಳೆಯಿಂದ ಟಿಬಿ ಡ್ಯಾಮ್ ವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಹಿನ್ನೆಲೆ ಪರಿಹಾರಕ್ಕೆ ಮನವಿ ಮಾಡಿರುವುದು ಹಾಸ್ಯಾಸ್ಪದ, ಎಲ್ಲದಕ್ಕೂ ನಿಯಮಗಳಿವೆ. ಮೊದಲು ಸರ್ಕಾರ ಬರ ಘೋಷಣೆ ಮಾಡಬೇಕು, ಅಧಿಕಾರಿಗಳು ಕಚೇರಿಯಿಂದ ಹೊರಗೆ ಬರಲಿದ್ದಾರೆ. ಸಮೀಕ್ಷೆ ಮಾಡಿ ಹಾನಿ ಕುರಿತು ವರದಿ ಪಡೆಯಬೇಕು. ನಂತರ ಅದನ್ನು ಕೇಂದ್ರಕ್ಕೆ ಕಳಿಸಬೇಕು, ಅಲ್ಲಿಂದ ಬರ ಅಧ್ಯಯನ ತಂಡ ಆಗಮಿಸಿ ವೀಕ್ಷಣೆ ಮಾಡಲಿದ್ದಾರೆ.
ಇದನ್ನೂ ಓದಿ:
ನಂತರ ಪರಿಹಾರ ಹಣ ಬಿಡುಗಡೆಗೆ ಕೇಂದ್ರ ಮುಂದಾಗಲಿದೆ. ಈ ಎಲ್ಲ ಪ್ರಕ್ರಿಯೆ ಮಾಡದೇ ಕೇಂದ್ರ ಪರಿಹಾರ ನೀಡಬೇಕು ಎಂದು ಮನವಿ ಮಾಡಿ ಕೈಕಟ್ಟಿ ಕೂಡುವುದು ಸರಿಯಲ್ಲ. ಎಸ್ ಟಿಆರ್ ಎಫ್ ಹಾಗೂ ಎನ್ ಡಿಆರ್ ಎಫ್ ಹಣ ಬಿಡುಗಡೆ ಮಾಡಿದ್ದು, ಹೋಲಿಕೆ ಮಾಡಿನೋಡಿ, ಮೋದಿ ಅವರು ಪ್ರಧಾನ ಮಂತ್ರಿ ಆದಮೇಲೆ ಎಸ್ಟು ಪಟ್ಟು ಬಿಡುಗಡೆಯಾಗಿದೆ ಎಂಬುದನ್ನು ಲೆಕ್ಕ ಹಾಕಿ. ನನ್ನ ಪ್ರಕಾರ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಹೋಲಿಕೆ ಮಾಡಿದ್ರೆ 5 ಪಟ್ಟು ಹೆಚ್ಚಿಗೆ ಬಿಡುಗಡೆಯಾಗಿದೆ. ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ 2 ರಿಂದ 3 ತಿಂಗಳಲ್ಲೇ ರೈತರಿಗೆ ಬರ ಪರಿಹಾರ ಕೈಸೇರುತ್ತಿತ್ತು. 6 ರಿಂದ 9 ತಿಂಗಳಿಗೆ ನೀಡಿದ್ರೆ ಉಪಯೋಗವಿಲ್ಲ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು, ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.



