August 12, 2026
Wednesday, August 12, 2026
spot_img

Evening Special | 5 ನಿಮಿಷದಲ್ಲಿ ಮಾಡಿ ಕ್ರಿಸ್ಪಿ ನಿಪ್ಪಟ್ಟು ಮಸಾಲಾ

ಸಂಜೆಯ ಚಹಾ ಸಮಯಕ್ಕೆ ಬಿಸಿ ಬಿಸಿ ಬಜ್ಜಿ, ಬೋಂಡಾ ಮಾತ್ರವಲ್ಲ, ಗರಿಗರಿಯಾದ ನಿಪ್ಪಟ್ಟು ಮಸಾಲಾ ಕೂಡ ಟ್ರೈ ಮಾಡಬಹುದು. ಸಖತ್ ರುಚಿಯ ಈ ಸ್ಟ್ರೀಟ್ ಸ್ಟೈಲ್ ಸ್ನ್ಯಾಕ್ ಅನ್ನು ಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ನಿಪ್ಪಟ್ಟು – 6 ರಿಂದ 8 (ಸಣ್ಣದಾಗಿ ಪುಡಿ ಮಾಡಿದ್ದು)
ಮಂಡಕ್ಕಿ – ½ ಕಪ್
ಈರುಳ್ಳಿ – 1
ಟೊಮೆಟೊ – 1
ತುರಿದ ಕ್ಯಾರೆಟ್ – ½ ಕಪ್
ಹುರಿದ ಕಡಲೆಕಾಯಿ – 2 ಟೇಬಲ್ ಸ್ಪೂನ್
ಖಾರದ ಪುಡಿ – ¼ ಟೀ ಸ್ಪೂನ್
ಹಸಿರು ಖಾರದ ಚಟ್ನಿ – 1 ರಿಂದ 2 ಟೇಬಲ್ ಸ್ಪೂನ್
ಸಿಹಿ (ಖರ್ಜೂರ-ಹುಣಸೆ) ಚಟ್ನಿ – 1 ರಿಂದ 2 ಟೇಬಲ್ ಸ್ಪೂನ್
ನಿಂಬೆ ರಸ – 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸೇವ್ ಅಥವಾ ಮಿಕ್ಸ್ಚರ್ – ಅಲಂಕರಿಸಲು
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಒಂದು ದೊಡ್ಡ ಬೌಲ್‌ಗೆ ಪುಡಿ ಮಾಡಿದ ನಿಪ್ಪಟ್ಟು ಮತ್ತು ಮಂಡಕ್ಕಿಯನ್ನು ಹಾಕಿ.

ಇದಕ್ಕೆ ಕತ್ತರಿಸಿದ ಈರುಳ್ಳಿ, ಟೊಮೆಟೊ ಹಾಗೂ ತುರಿದ ಕ್ಯಾರೆಟ್ ಸೇರಿಸಿ.

ಹುರಿದ ಕಡಲೆಕಾಯಿ, ಖಾರದ ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಹಸಿರು ಖಾರದ ಚಟ್ನಿ, ಸಿಹಿ ಚಟ್ನಿ ಮತ್ತು ನಿಂಬೆ ರಸ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

ಕೊನೆಯಲ್ಲಿ ಮೇಲೆ ಸೇವ್ ಅಥವಾ ಮಿಕ್ಸ್ಚರ್ ಹಾಗೂ ಕೊತ್ತಂಬರಿ ಸೊಪ್ಪು ಉದುರಿಸಿ ತಕ್ಷಣವೇ ಬಡಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !