September 17, 2026
Thursday, September 17, 2026
spot_img

ಪ್ರತಿಯೊಂದು ಹಾರೈಕೆಯೂ ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದೆ: ಜನ್ಮದಿನಕ್ಕೆ ಶುಭಕೋರಿದವರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಪ್ರಧಾನಿ ಮೋದಿ ತಮ್ಮ 76ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ನೆಚ್ಚಿನ ನಾಯಕನ ಜನ್ಮದಿನಕ್ಕೆ ಜನಸಾಮಾನ್ಯರಿಂದ ಹಿಡಿದು ವಿಶ್ವನಾಯಕರು ಕೂಡ ಶುಭಾಶಯಗಳನ್ನು ಕೋರಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ರಿಯಾಕ್ಟ್‌ ಮಾಡಿದ್ದು, ವಿಶಸ್‌ ತಿಳಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ದೇಶಾದ್ಯಂತ ನನ್ನ ಜನ್ಮದಿನಕ್ಕಾಗಿ ಸಾವಿರಾರು ಸಾರ್ಥಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಬಿಜೆಪಿಯ ಆಶಿರ್ವಾದ್‌ ಕಾ ದಿಯಾ ಕಾರ್ಯಕ್ರಮವೂ ನನ್ನ ಹೃದಯವನ್ನು ಸ್ಪರ್ಶಿಸಿದೆ. ನಿಮ್ಮ ಪ್ರೀತಿ ಶುದ್ಧವಾದ್ದು, ಮನಸ್ಸು ಶುದ್ಧವಾದ್ದು. ದೇಶದ ಪ್ರತೀ ಜನರು ನನಗಾಗಿ ಹಾರೈಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ನೀವು ನನ್ನ ಮೇಲೆ ಇಟ್ಟಿರುವ ಗೌರವ ಹಾಗೂ ಪ್ರೀತಿ ನನಗೆ ಇನ್ನಷ್ಟು ದೇಶಸೇವೆ ಮಾಡಲು ಶಕ್ತಿ ನೀಡುತ್ತದೆ ಎಂದಿದ್ದಾರೆ.

ಸೆಪ್ಟೆಂಬರ್ 17 ರಂದು ದೇಶಾದ್ಯಂತ ಜನರು ದೀಪ ಹಚ್ಚಿ ಪ್ರಧಾನಿಗೆ ಶುಭ ಹಾರೈಸಬೇಕೆಂದು ಬಿಜೆಪಿ ಮನವಿ ಮಾಡಿದೆ. 2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮತ್ತು 2014 ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ನಂತರ, ಪ್ರಧಾನಿ ಮೋದಿಯವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸಿದ ಆಚರಣೆಯ ಭಾಗವಾಗಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !