BE HAPPY | ಪ್ರತಿದಿನ ಎಕ್ಸೈಟಿಂಗ್ ಆಗಿ ಇರೋದಿಲ್ಲ, ಇರೋದನ್ನು ಎಕ್ಸೈಟಿಂಗ್ ಮಾಡ್ಕೋಬೇಕಷ್ಟೆ.. ಹೇಗೆ ನೋಡಿ..

ಅದೇ ಕೆಲಸ, ಅದೇ ಮನೆ, ಅದೇ ಜನ, ಅದೇ ಜೀವನ ಬೋರ್ ಆಗೋದಿಲ್ವಾ? ಎಲ್ಲರಿಗೂ ಬೋರಿಂಗ್ ದಿನಗಳು ಇದ್ದೇ ಇರುತ್ತವೆ. ಹಾಗಂತ ಈ ದಿನಗಳನ್ನು ನೆಗ್ಲೆಕ್ಟ್ ಮಾಡೋಕಾಗೋದಿಲ್ಲ. ದಿನದಲ್ಲಿ ಏನಾದ್ರೂ ಎಕ್ಸೈಟಿಂಗ್ ಆಗೋ ವಿಷಯವನ್ನು ನಾವೇ ಹುಡ್ಕೋಬೇಕು.. ಹೇಗೆ ನೋಡಿ..

  • ನಿಮ್ಮ ಹಾಬಿಗೆ ಸಮಯ ಕೊಡಿ, ಇಷ್ಟದ ಒಂದು ವಿಷಯವನ್ನು ಮಾಡಿ, ಪೇಂಟಿಂಗ್, ಬರವಣಿಗೆ, ಮೇಕಪ್, ಕ್ರಿಕೆಟ್ ಯಾವುದೇ ಆಗಿರಲಿ.
  • ಮನೆಯ ಫರ್ನಿಚರ್‌ಗಳನ್ನು ಬದಲಾವಣೆ ಮಾಡಿ, ಆಕಡೆಯಿಂದ ಈ ಕಡೆಗೆ ಇಡಿ, ಹೊಸ ಕರ್ಟನ್ ಹಾಕಿ ಹೀಗೆ ಬದಲಾವಣೆ ಮಾಡುತ್ತಾ ಹೋಗಿ..
  • ಮನೆಯಲ್ಲೇ ಪಾರ್ಟಿ ಆರ್ಗನೈಸ್ ಮಾಡಿ, ಬೇರೆಯವರಿಗಲ್ಲ, ನಿಮಗೆ ಮಾತ್ರ, ಮೂವಿ ನೈಟ್, ಡಿನ್ನರ್ ಡೇಟ್, ಕ್ಯಾಂಪಿಂಗ್ ಹೀಗೆ..
  • ಹೊಸ ಆಹಾರ ಟ್ರೈ ಮಾಡಿ, ಯೂಟ್ಯೂಬ್ ನೋಡಿ ಹೊಸ ರೆಸಿಪಿಯೊಂದನ್ನ ಮನೆಯಲ್ಲೇ ಮಾಡಿನೋಡಿ.
  • ಇಷ್ಟವಿದ್ದರೆ ಮನೆಗೆ ಪ್ರಾಣಿಯೊಂದನ್ನು ತಂದು ಸಾಕಿ, ಮುದ್ದಿನ ಪ್ರಾಣಿ ಜೀವನ ಬದಲಾಯಿಸಬಹುದು.
  • ನಿಮ್ಮ ಕಬೋರ್ಡ್, ಕೆಲಸ ಮಾಡುವ ಜಾಗ, ಶೋಕೇಸ್ ಹೀಗೆ ಎಲ್ಲವನ್ನೂ ಬದಲಾಯಿಸಿ ನೋಡಿ..
  • ಯಾವಾಗಲೂ ರೆಡಿಯಾಗೋ ರೀತಿ ರೆಡಿಯಾಗಬೇಡಿ, ಬೋಲ್ಡ್ ಆಗಿ ರೆಡಿಯಾಗಿನೋಡಿ.
  • ಮನೆಯವರ ಜೊತೆ ಅಥವಾ ಸ್ನೇಹಿತರ ಜೊತೆ ಟ್ರಿಪ್ ಪ್ಲ್ಯಾನ್ ಮಾಡಿ, ಪ್ಲ್ಯಾನ್ ಮಾಡೋದು ಕೂಡ ಎಕ್ಸೈಟಿಂಗ್ ಹೋಗ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!