ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ವಿಶ್ವವೇ ಭಾರತದ ಬಜೆಟ್‌ನ್ನು ಎದುರು ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ್ದು, ಭಾರತ ಮೊದಲು, ನಾಗರಿಕರು ಮೊದಲು ಎಂಬ ಧ್ಯೇಯದೊಂದಿಗೆ ಬಜೆಟ್ ಅಧಿವೇಶನ ನಡೆಯಲಿದೆ. ಸಾಕಷ್ಟು ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಜನಸಾಮಾನ್ಯರ ಕೈಗೆಟುಕುವ ಬಜೆಟ್ ನೀಡಲಾಗುತ್ತದೆ.
ಈ ನಿಟ್ಟಿನಲ್ಲಿ ಸಚಿವೆ ನಿರ್ಮಲಾ ಸೀತಾರಾಮ್ ಅವರು ಪ್ರಯತ್ನಿಸಲಿದ್ದಾರೆ ಎನ್ನುವ ದೃಢ ನಂಬಿಕೆ ಇದೆ, ಇದೀಗ ಬರೀ ಭಾರತ ಅಲ್ಲ, ವಿಶ್ವವೇ ಬಜೆಟ್‌ಗಾಗಿ ಎದುರು ನೋಡುತ್ತಿದೆ ಎಂದಿದ್ದಾರೆ. ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಭಾಷಣದೊಂದಿಗೆ ಬಜೆಟ್ ಅಧಿವೇಶನಕ್ಕೆ ಚಾಲನೆ ದೊರತಿದೆ.