ಹೊಸದಿಗಂತ ವರದಿ ವಿಜಯಪುರ:
ಸರ್ಕಾರ ಘೋಷಣೆ ಮಾಡಿರುವ ಮೀಸಲಾತಿಯನ್ನು ಒಪ್ಪಿಕೊಳ್ಳಬೇಕು ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ಟಾಂಗ್ ನೀಡಿದರು.
ನಗರದ ಜ್ಞಾನಯೋಗಾಶ್ರಮಕ್ಕೆ ಶುಕ್ರವಾರ ಭೇಟಿ ನೀಡಿ, ಸಿದ್ಧೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇರುವ ಸ್ಥಾನಗಳಲ್ಲಿ ಎಲ್ಲರಿಗೂ ಹಂಚಿಕೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಇದರ ಸ್ಪಷ್ಟರೂಪ ತಿಳಿಯಲಿದೆ. ಅಂತಿಮ ವರದಿ ಬಳಿಕ ಯಾರಿಗೆ ಎಷ್ಟು ಪ್ರತಿಶತ ಮೀಸಲಾತಿ ಎನ್ನುವುದು ಗೊತ್ತಾಗುತ್ತದೆ ಎಂದರು.
ನಮ್ಮ ಸಮಾಜದ ಜನ ಜಾಗೃತರಾಗಿದ್ದಾರೆ. ಯಾರೋ ಕೆಲವರು ಒಪ್ಪೊದಿಲ್ಲ ಎಂದರೆ ಆಗೋದಿಲ್ಲ. ಜನರು ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಮೀಸಲಾತಿ ಎಲ್ಲರಿಗೂ ಸಹಾಯಕವಾಗಲಿ ಎಂದರು.
ಅಲ್ಲದೆ ಸಿದ್ಧೇಶ್ವರ ಶ್ರೀಗಳು ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬಾರದು. ಶ್ರೀಗಳು ಮೊದಲಿನಂತೆ ಎಲ್ಲರಿಗೂ ದರ್ಶನ ನೀಡುತ್ತಾರೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ