ಗುಜರಾತಿನ ಅಮುಲ್-‌ ಕರ್ನಾಟಕದ ನಂದಿನಿ ಕೈ ಜೋಡಿಸಲಿ: ಅಮಿತ್‌ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಂಡ್ಯಕ್ಕೆ ಭೇಟಿ ನೀಡಿರುವ ಗೃಹಸಚಿವ ಅಮಿತ್‌ ಶಾ, ಮೆಗಾ ಡೈರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಕರ್ನಾಟಕ ಹೈನುಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.
ಇಲ್ಲಿನ ರೈತ ಸಹಕಾರಿಗಳಿಗೆ, ರೈತರಿಗೆ ಅನ್ಯಾಯ ಆಗಲು ಬಿಡಲ್ಲ. ಗುಜರಾತ್‌ ನ ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಟ್ಟಿಗೆ ಕಾರ್ಯನಿರ್ವಹಿಸಬೇಕು. ಇದರಿಂದ ಎಲ್ಲಾ ಹಳ್ಳಿಗಳಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಂಡ್ಯ ಮೆಗಾ ಡೈರಿ ಉದ್ಘಾಟನೆ ಆಗಿದೆ. 260ಕೋಟಿ ವೆಚ್ಚದಲ್ಲಿ ಮಿಲ್ಕ್ ಫ್ಲಾಂಟ್ ನಿರ್ಮಾಣ ಆಗಿದೆ. ಪ್ರತಿದಿನ 10ಲಕ್ಷ ಲೀ. ಹಾಲು ಸಂಸ್ಕರಣೆ ಆಗುತ್ತಿದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀ ಸಂಸ್ಕರಣೆಗೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು. 1975ರಿಂದ ಇಲ್ಲಿಯವರೆಗೆ ಕರ್ನಾಟಕ ಡೈರಿ ಕ್ಷೇತ್ರದಲ್ಲಿ ಒಳ್ಳೆಯ ಪ್ರಗತಿ ಸಾಧಿಸಿದೆ‌. ಹೆಚ್ಚು ರೈತರು ಹೈನೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ.ಮಿಲ್ಕ್ ಫೆಡರೇಶನ್ ನಲ್ಲಿ ಮೊದಲು ನಾಲ್ಕು ಕೋಟಿ ಟರ್ನೋವರ್ ಇತ್ತು. ಈಗ 25 ಕೋಟಿ ಟರ್ನೋವರ್ ಆಗುತ್ತಿದೆ. 16 ಜಿಲ್ಲೆಗಳಿಂದ 28ಕೋಟಿ ರೂ ಹಣ 36ಲಕ್ಷ ರೈತರಿಗೆ ಬ್ಯಾಂಕ್ ಅಕೌಂಟ್ ಮೂಲಕ ಜಮಾ ಆಗುತ್ತಿದೆ ಎಂದು ಹೇಳಿದರು.
ಎನ್ ಡಿಡಿ ಮೂಲಕ ಪ್ರತಿ ಪಂಚಾಯ್ತಿಯಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಆಗಬೇಕಿದೆ. ಎರಡು ಲಕ್ಷ ಪ್ರೈಮರಿ ಡೈರಿ ನಿರ್ಮಾಣ ಮಾಡುವ ಮೂಲಕ ಹಾಲನ್ನ ರಫ್ತು ಮಾಡಬೇಕಿದೆ.
ಗುಜರಾತ್ ನ ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಟ್ಟಿಗೆ ಸೇರಿ ಮತ್ತಷ್ಟು ಹಾಲಿನ ಉತ್ಪಾದನೆಗೆ ಮುಂದಾಗಬೇಕು. ಇದಕ್ಕೆ ಬೇಕಾದ ಎಲ್ಲಾ ಪ್ರೋತ್ಸಾಹವನ್ನ ಸಹಕಾರ ಇಲಾಖೆ ನೀಡಲಿದೆ. ಹೈನೊದ್ಯಮದಲ್ಲಿ ಆದ ಪ್ರಗತಿಗೆ ಬೊಮ್ಮಾಯಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ರೈತರಿಗೆ ನೇರವಾಗಿ ಹಣ ಸಂದಾಯ ಆಗುತ್ತಿದೆ. ಕ್ಷೀರ ಭಾಗ್ಯ ಯೋಜನರಯಲ್ಲಿ 52ಲಕ್ಷ ಲೀ. ಹಾಲನ್ನು ಅಂಗನವಾಡಿ ಕೇಂದ್ರಗಳಿಗೆ ನೀಡಲಾಗ್ತಿದೆ. ಮಂಡ್ಯ ಮೆಗಾ ಡೈರಿಯ ಅಧ್ಯಕ್ಷರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!