May 5, 2026
Tuesday, May 5, 2026
spot_img

ಎಲ್ಲಾ ಆಗ್ತಿರೋದು ಯುದ್ಧದಿಂದ: ಭಾರತದಲ್ಲಿ 25 ಲಕ್ಷ ಮಂದಿ ಬಡತನದ ಅಂಚಿಗೆ? UNDP ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಮುಂದುವರಿಯುತ್ತಿರುವ ಸಂಘರ್ಷದ ಪರಿಣಾಮ ಭಾರತಕ್ಕೂ ಗಂಭೀರ ಆರ್ಥಿಕ ಹೊಡೆತ ತಗುಲುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಎಚ್ಚರಿಸಿದೆ. ಹೊಸ ವರದಿ ಪ್ರಕಾರ, ಈ ಬಿಕ್ಕಟ್ಟು ಮುಂದುವರಿದರೆ ಭಾರತದಲ್ಲಿ ಸುಮಾರು 25 ಲಕ್ಷ ಮಂದಿ ಹೆಚ್ಚುವರಿಯಾಗಿ ಬಡತನದ ಅಂಚಿಗೆ ತಳ್ಳಲ್ಪಡುವ ಅಪಾಯ ಇದೆ.

ಇಂಧನ, ಸಾಗಣೆ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಖರೀದಿ ಶಕ್ತಿ ಕುಸಿಯುತ್ತಿದೆ. ಇದರ ನೇರ ಪರಿಣಾಮವಾಗಿ ಆಹಾರ ಭದ್ರತೆ, ಉದ್ಯೋಗ ಹಾಗೂ ಸಣ್ಣ ಉದ್ಯಮಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ವಿಶೇಷವಾಗಿ ಅಸಂಘಟಿತ ಕ್ಷೇತ್ರ ಮತ್ತು ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:

ಭಾರತ ತನ್ನ ತೈಲ ಅವಶ್ಯಕತೆಯ ಬಹುಪಾಲನ್ನು ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆ, ಅಲ್ಲಿನ ಅಶಾಂತಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಹಾಗೂ ರಸಗೊಬ್ಬರಗಳ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಬಜೆಟ್ ಮತ್ತು ಕುಟುಂಬಗಳ ದಿನನಿತ್ಯದ ಖರ್ಚು ಮತ್ತಷ್ಟು ಹೆಚ್ಚಾಗಬಹುದು.

UNDP ಅಂದಾಜಿನ ಪ್ರಕಾರ, ಭಾರತದ ಮಾನವ ಅಭಿವೃದ್ಧಿ ಪ್ರಗತಿಗೂ ಸಣ್ಣ ಮಟ್ಟಿನ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗ ನಷ್ಟ, ವ್ಯಾಪಾರ ವ್ಯತ್ಯಯ ಮತ್ತು ವಿದೇಶದಲ್ಲಿರುವ ಭಾರತೀಯರಿಂದ ಬರುವ ಹಣ ವರ್ಗಾವಣೆ ಕಡಿಮೆಯಾಗುವುದು ಈ ಸಂಕಷ್ಟವನ್ನು ಇನ್ನಷ್ಟು ಗಂಭೀರಗೊಳಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !