ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡಿಯೇ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಒಳ್ಳೆಯ ಗಂಡ, ಎರಡು ಮುದ್ದಿನ ಮಕ್ಕಳು. ಆದರೆ, ತಂಬಾಕು ಎಲ್ಲವನ್ನೂ ಕೆಡಿಸಿಬಿಡ್ತು. ಈಗ ಹರಡುತ್ತಿರುವ ಈ ಕ್ಯಾನ್ಸರ್ನ ನನ್ನ ಮುಖದಿಂದ ಕತ್ತರಿಸಿ ತೆಗಿಯಬೇಕಾಗಿದೆ. ಇನ್ನು ಯಾವುದೂ ಮೊದಲಿನ ಥರ ಇರಕ್ಕಾಗಲ್ಲ. ತಂಬಾಕು ನನ್ನ ಬದುಕನ್ನೇ ಸರ್ವನಾಶ ಮಾಡಿಬಿಡ್ತು…
ಥಿಯೇಟರ್‌ಗಳಲ್ಲಿ ಸಿನಿಮಾ ನೋಡೋರಿಗೆ ಈ ಸಾಲುಗಳು ಹೊಸತೇನಲ್ಲ, ತಂಬಾಕು ತನ್ನ ಲೈಫ್‌ನ್ನು ಹೇಗೆ ಹಾಳು ಮಾಡಿದೆ ಎಂದು ಹೇಳುವ ಈ ಜಾಹೀರಾತು ಇನ್ಮುಂದೆ ಥಿಯೇಟರ್‌ನಲ್ಲಿ ಕಾಣೋದಿಲ್ಲ.
ಥಿಯೇಟರ್‌ನಲ್ಲಿ ಈಗ ತಂಬಾಕಿನ ಹೊಸ ಜಾಹೀರಾತು ಬಂದಿದೆ. ತಂಬಾಕು ತಿಂದರೆ ಏನೆಲ್ಲ ಸಮಸ್ಯೆ ಆಗುತ್ತದೆ ಎಂಬುದನ್ನು ಸುನಿತಾ ಹೇಳಿಕೊಂಡಿದ್ದಳು. ಈಗ ಇವಳ ಬದಲು ಓಂ ಪ್ರಕಾಶ್ ಹೆಸರಿನ ವ್ಯಕ್ತಿ ಬಂದಿದ್ದಾನೆ. ಸಣ್ಣ ವಯಸ್ಸಿನಿಂದ ತಂಬಾಕು ತಿಂದು ಈತನಿಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ. ಆ ಬಗ್ಗೆ ಅವರ ಪತ್ನಿ ಸುನಿತಾ ಮಾತನಾಡುತ್ತಾಳೆ.
ಧೂಮಪಾನದ ಜಾಹೀರಾತಲ್ಲೂ ಬದಲಾವಣೆ ಆಗಿದೆ. ಸಿಗರೇಟ್ ಸೇದುವುದನ್ನು ಬಿಡುವುದರಿಂದ ಆರೋಗ್ಯದಲ್ಲಿ ಏನೆಲ್ಲಾ ಚೇತರಿಕೆಯಾಗುತ್ತದೆ ಎಂಬ ಹೊಸ ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಜಾಹೀರಾತು ಶುಕ್ರವವಾರದಿಂದ ಪ್ರದರ್ಶನ ಕಾಣುತ್ತಿದೆ.