ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾದ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಸಿಯೆಟ್ ಕ್ರಿಕೆಟ್ ಪ್ರಶಸ್ತಿ ಸಮಾರಂಭದಲ್ಲಿಕಾಣಿಸಿಕೊಂಡರು. ರೋಹಿತ್ ಜೊತೆ ಪತ್ನಿ ರಿತಿಕಾ ಸಜ್ದೇಹ್ ಕೂಡ ಆಗಮಿಸಿದ್ದರು. ಈ ವೇಳೆ ರಿತಿಕಾಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.
ವಿಡಿಯೋದಲ್ಲಿ ರಿತಿಕಾ ಮತ್ತೊಮ್ಮೆ ಗರ್ಭಿಣಿಯಾದಂತೆ ಕಾಣ್ತಿದೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ, ಮತ್ತೆ ತಂದೆ ಆಗುತ್ತಿದ್ದಾರೆ ಎಂದು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಅಲ್ಲದೇ ರಿತಿಕಾ ಗರ್ಭಿಣಿ ಆಗಿರುವ ಬಗ್ಗೆ ಹತ್ತಿರದ ಸಂಬಂಧಿಯೊಬ್ಬರು ಖಚಿತಪಡಿಸಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಆದರೆ ರೋಹಿತ್ ಹಾಗೂ ರಿತಿಕಾ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
Junior Hitman 🔜🥹🧿🥹😭 pic.twitter.com/7CQCXsHy2i
— 𝐑𝐮𝐬𝐡𝐢𝐢𝐢⁴⁵ (@rushiii_12) August 23, 2024