Saturday, June 10, 2023

Latest Posts

ಬಿಜೆಪಿ ಮಾಜಿ ಶಾಸಕನ ಮೇಲೆ ನಕ್ಸಲರ ದಾಳಿ: ಇಬ್ಬರು ಅಂಗರಕ್ಷಕರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಜನತಾ ಪಕ್ಷದ ಮಾಜಿ ಶಾಸಕರನ್ನು ಗುರಿಯಾಗಿಸಿ ನಕ್ಸಲರು ದಾಳಿ ನಡೆಸಿದ್ದು, ಈ ವೇಳೆ ಶಾಸಕರ ಇಬ್ಬರು ಅಂಗರಕ್ಷಕರು ಹತ್ಯೆಯಾಗಿದ್ದಾರೆ.
ಜಾರ್ಖಂಡ್‌ ನ ಮಾಜಿ ಶಾಸಕ ಗುರುಚರಣ್‌ ನಾಯಕ್‌ ರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಗೋಯೆಲ್ಕೆರಾದ ತುನಿಯಾ ಗ್ರಾಮದಲ್ಲಿ ಆಯೋಜಿಸಿದ್ದ ಫುಟ್‌ಬಾಲ್‌ ಸ್ಪರ್ಧೆಗೆ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ಗುರುಚರಣ್‌ ಮೇಲೆ ದಾಳಿ ಮಾಡಲಾಗಿದೆ.
ಅದೃಷ್ಟವಶಾತ್‌ ಗುರುಚರಣ್‌ ಕೂದರೆಳೆ ಅಂತರದಲ್ಲಿ ಪಾರಾಗಿದ್ದಾರೆ. ಆದರೆ ಇವರನ್ನು ರಕ್ಷಿಸಲು ಬಂದ ಅಂಗರಕ್ಷಕರಾದ ಶಂಕರ್‌ ನಾಯಕ್‌ ಮತ್ತೆ ಹೆಂಬ್ರಾಮ್‌ ಠಾಕೂರ್‌ ಮೃತಪಟ್ಟಿದ್ದಾರೆ. ಅವರ ಬಳಿ ಇದ್ದ ಎಕೆ 47 ರೈಫಲ್‌ ಗಳನ್ನು ಕದ್ದು ನಕ್ಸಲರು ಪರಾರಿಯಾಗಿದ್ದಾರೆ. ಈ ವೇಳೆ ಮತ್ತೊಬ್ಬ ಅಂಗರಕ್ಷಕ ರಾಮ್‌ ಕುಮಾರ್‌ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಿನ ಭದ್ರತೆಗೆ ಸ್ಥಳಕ್ಕೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!