ಟ್ವಿಟ್ಟರ್‌ ವಿರುದ್ಧ ಕೇಸ್‌ ದಾಖಲಿಸಿದ ಮಾಜಿ ಉದ್ಯೋಗಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಲಿಯನೇರ್‌ ಎಲಾನ್‌ ಮಸ್ಕ್‌ ಸಾಮಾಜಿಕ ಜಾಲತಾಣ ಟ್ವಿಟ್ಟರನ್ನು ಸ್ವಾಧೀನ ಪಡಿಸಿಕೊಂಡ ನಂತರ ಅಲ್ಲಿಂದ ವಜಾಗೊಂಡಿದ್ದ ಗುತ್ತಿಗೆ ಆಧಾರದ ಕೆಲಸಗಾರರು ಟ್ವಿಟ್ಟರ್‌ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.ತಾವೂ ಕೂಡ ಸಾಮಾನ್ಯ ಉದ್ಯೋಗಿಗಳಂತೆಯೇ ಅದೇ ಕರ್ತವ್ಯಗಳನ್ನು ಹೊಂದಿರುವ ಕಾರ್ಯಪಡೆ ಹಾಗಾಗಿ ಸೂಚನೆಯಿಲ್ಲದೇ ನಮ್ಮನ್ನು ಹೊರಹಾಕಲು ಸಾಧ್ಯವಿಲ್ಲ. ಆದರೆ ಮಸ್ಕ್‌ ಕಂಪನಿಯನ್ನು ವಶಪಡಿಸಿಕೊಂಡ ನಂತರ ಸೂಚನೆಯಿಲ್ಲದೇ ನಮ್ಮನ್ನು ಹೊರಹಾಕಿದ್ದಾರೆ ಎಂದು ಅವರು ವಾದಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊ ​​​​ಫೆಡರಲ್ ನ್ಯಾಯಾಲಯದಲ್ಲಿ TEKsystems Inc.ಕಂಪನಿಯ ಮೂಲಕ ಟ್ವಿಟರ್‌ ಗೆ ನೇಮಕಗೊಂಡಿದ್ದ ಗುತ್ತಿಗೆ ಆಧಾರದ ಕೆಲಸಗಾರರು ಇದೀಗ ಪ್ರಕರಣ ದಾಖಲಿಸಿದ್ದಾರೆ. “TEK ವ್ಯವಸ್ಥೆಗಳ ಮೂಲಕ ನೇಮಕಗೊಂಡ ಟ್ವಿಟರ್ ಉದ್ಯೋಗಿಗಳು ತಾತ್ಕಾಲಿಕ ಉದ್ಯೋಗಿಗಳಲ್ಲ. ಅವರು ಟ್ವಿಟ್ಟರ್‌ ಉದ್ಯೋಗಿಗಳಾಗಲು ಅವಕಾಶ ಹೊಂದಿರುತ್ತಾರೆ. ಆದರೆ ಸಾಮೂಹಿಕ ವಜಾಗಳಲ್ಲಿ ಯಾವುದೇ ಮುನ್ಸೂಚನೆಯಿಲ್ಲದೇ ತೆಗೆದುಹಾಕಲಾಗಿದೆ. ಕ್ಯಾಲಿಫೋರ್ನಿಯಾ ಕಾನೂನಿನ ಪ್ರಕಾರ ಕಾರ್ಮಿಕರಿಗೆ 60 ದಿನಗಳ ಮುಂಗಡ ಲಿಖಿತ ಸೂಚನೆಯನ್ನು ನೀಡಬೇಕು. ಆದರೆ ನಮಗೆ ಯಾವುದೇ ರೀತಿಯ ಮುನ್ಸೂಚನೆ ನೀಡಲಾಗಿಲ್ಲ” ಎಂದು ವಜಾಗೊಂಡ ಉದ್ಯೋಗಿಗಳು ವಾದಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!