ಹಾಲಿವುಡ್ ಗಾಯಕ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ ಮಾಜಿ ಪ್ರೇಯಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಲಿವುಡ್ ನ ಖ್ಯಾತ ಗಾಯಕ ಫಿಫ್ಟಿ ಸೆಂಟ್ (ಕರ್ಟಿಸ್ ಜೇಮ್ಸ್ ಜ್ಯಾಕ್ಷನ್) ವಿರುದ್ಧ, ಮಾಜಿ ಪ್ರೇಯಸಿ ಅತ್ಯಾಚಾರದ ಆರೋಪ ಮಾಡಿದ್ದಾರೆ.

ಜನಪ್ರಿಯ ಮಾಡೆಲ್ ಆಗಿರುವ ಡ್ಯಾಫ್ನಿ ಜೋಯ್ ಹಾಗೂ ಫಿಫ್ಟಿ ಸೆಂಟ್ ಹಲವಾರು ವರ್ಷಗಳಿಂದ ಲಿವಿನ್ ರಿಲೇಷನ್ ಶಿಪ್ ನಲ್ಲಿದ್ದರು. ನಂತರ ಇವರು ದೂರವಾಗಿದ್ದಾರೆ. ದೂರವಾದ ನಂತರ ಅತ್ಯಾಚಾರ, ಹಲ್ಲೆ ಮತ್ತು ನಿಂದನೆಯ ಆರೋಪವನ್ನೂ ಹೊರಸಿದ್ದಾರೆ.

ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನೀನು ಸರಿ ಹೋಗಿ, ತಂದೆಯ ಜವಾಬ್ದಾರಿಯನ್ನು ಸಮರ್ಥವಾಗಿ ಪೂರೈಸುತ್ತೀಯಾ ಅಂದುಕೊಂಡಿದೆ. ಆ ಕಾಯುವಿಕೆ ವ್ಯರ್ಥವಾಗಿದೆ ಎಂದು ಬರೆದುಕೊಂಡಿದ್ದಾರೆ.

ಈ ಜೋಡಿಗೆ ಒಂದು ಮಗು ಕೂಡ ಇದೆ. ಈ ಮಗುವನ್ನು ನೋಡಲು ಅವರು ಬರುತ್ತಿಲ್ಲ ಎನ್ನುವುದು ಡ್ಯಾಫ್ನಿ ಆರೋಪ ಕೂಡ. ಅಂದ ಹಾಗೆ ಡ್ಯಾಫ್ನಿ ಮೇಲೆ ವೇಶ್ಯಾವಾಟಿಕೆ ಮಾಡುತ್ತಿದ್ದರು ಎನ್ನುವ ಆರೋಪ ಕೂಡ ಇದೆ. ಇದೇ ವಿಷಯವಾಗಿ ಫಿಫ್ಟಿ ಮತ್ತು ಡ್ಯಾಫ್ನಿ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ಕೂಡ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!