ಹೊಸದಿಗಂತ ಕಲಬುರಗಿ:
ಮಾಜಿ ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ್ ಜಮಾದಾರ್ ಕೊಲೆ ಪ್ರಕರಣದ ಆರೋಪಿ ಲಕ್ಷ್ಮಣ ಪೂಜಾರಿ ಮೇಲೆ ಶನಿವಾರ ಬೆಳ್ಳಂಬೆಳಗ್ಗೆ ಪೋಲಿಸರಿಂದ ಫೈರಿಂಗ್ ಮಾಡಿದ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಮಾಡ್ಯಾಳ ಬಳಿ ನಡೆದಿದೆ.
ಕೊಲೆ ಪ್ರಕರಣದಲ್ಲಿ ಗನ್ ರಿಕವರಿ ಸಲುವಾಗಿ ತೆರಳಿದ್ದ ವೇಳೆ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪಿಎಸ್ಐ ಇಂದುಮತಿ ಅವರಿಂದ ಲಕ್ಷ್ಮಣ ಪೂಜಾರಿಯ ಬಲಗಾಲಿಗೆ ಫೈರಿಂಗ್ ಮಾಡಲಾಗಿದೆ.
ಇದೇ ಸೆ.೧೩ರಂದು ಆಳಂದ ತಾಲೂಕಿನ ಖಾನಾಪುರ ಕ್ರಾಸ್ ಬಳಿ ನಡೆದಿದ್ದ ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ್ ಪೂಜಾರಿ ಮೇಲೆ ಲಕ್ಷ್ಮಣ ಜಮಾದಾರ್ ಮೂರು ಬಾರಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿ, ಪರಾರಿಯಾಗಿದ್ದು, ಆರೋಪಿ ಲಕ್ಷ್ಮಣ ಪೂಜಾರಿ ಕಲಬುರಗಿ, ಬೆಂಗಳೂರು ಸೇರಿದಂತೆ ಹಲವೆಡೆ ಗನ್ ಸಪ್ಲೈ ಮಾಡುತ್ತಿದ್ದ ಎಂಬ ಆರೋಪದಡಿಯಲ್ಲಿ ವಿವಿಧ ಪೋಲಿಸ್ ಠಾಣೆಗಳಲ್ಲಿ ೧೧ ಪ್ರಕರಣಗಳು ದಾಖಲಾಗಿದ್ದವು.
ಪಿಎಸ್ಐ ಇಂದುಮತಿ ನೇತೃತ್ವದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಫೈರಿಂಗ್ ನಡೆದಿದ್ದು, ಪಿಎಸ್ಐ ಅವರ ಕೈಗೂ ಸಹ ಗಾಯವಾಗಿದ್ದು, ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ಆರೋಪಿ ಲಕ್ಷಣ ಪೂಜಾರಿಯನ್ನು ಕಲಬುರಗಿ ನಗರದ ಟ್ರಾಮಾ ಕೆರ್ ಸೇಂಟ್ರನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲಬುರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ನಗರದ ಬಸವೇಶ್ವರ ಆಸ್ಪತ್ರೆಗೆ ತೆರಳಿ ಪಿಎಸ್ಐ ಇಂದುಮತಿ ಅವರ ಆರೋಗ್ಯ ವಿಚಾರಿಸಿ, ಘಟನೆಯ ಕುರಿತು ವಿವರಣೆ ಪಡೆದುಕೊಂಡರು.