ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಜಗತ್ತಿನಲ್ಲಿ ಪ್ರಜೆಗಳ ಖಾತೆಗೆ ಹಣ ಜಮಾ ಮಾಡುತ್ತಿರುವ ಏಕೈಕ ಸರ್ಕಾರ ನಮ್ಮದು ಎಂದು ಹೇಳಿದ್ದಾರೆ.
ನಗರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಮುಡಾ ನಿಧಿಯನ್ನು ಬಳಸಲಾಗಿದೆ. ಅದರಲ್ಲಿ ತಪ್ಪೇನು? ಈ ಹಣವನ್ನು ಜನರ ಅನುಕೂಲಕ್ಕೆ ಬಳಸಬೇಕು. ಬಳಕೆ ಮಾಡುವುದರಲ್ಲಿ ಯಾವ ತಪ್ಪುಗಳು ಆಗಿಲ್ಲ. ಪ್ರತಿಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ ಎಂದರು.
ಜನರ ಖಾತೆಗೆ ಹಣ ಹಾಕುವ ವಿಶ್ವದ ಏಕೈಕ ಸರ್ಕಾರ ನಮ್ಮದು. ಇಂತಹ ಯೋಜನೆಗಳನ್ನು ಅವರಿಂದ ಸಹಿಸಲು ಸಾಧ್ಯವಿಲ್ಲ, ವಿನಾಕರಣ ಆರೋಪಗಳನ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.