ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತ ಕಂಡ ಶ್ರೇಷ್ಠ ಉದ್ಯಮಿಗಳ ಪೈಕಿ ಒಬ್ಬರಾದ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್​ನ ಮಾಜಿ ಅಧ್ಯಕ್ಷರಾದ ಕೇಶುಬ್ ಮಹೀಂದ್ರ ಏಪ್ರಿಲ್ 12, ಬುಧವಾರದಂದು ನಿಧನರಾಗಿದ್ದಾರೆ.

99 ವರ್ಷದ ಕೇಶಬ್ ಮಹೀಂದ್ರ ನಿಧನರಾದರೆಂದು ಬಾಹ್ಯಾಕಾಶ ಇಲಾಖೆಯ ಇನ್​ಸ್ಪೇಸ್ ಸಂಸ್ಥೆಯ (INSPACe) ಛೇರ್ಮನ್ ಪವನ್ ಕೆ ಗೋಯೆಂಕಾ ಇಂದು ತಮ್ಮ ಟ್ವೀಟ್​ಮೂಲಕ ತಿಳಿಸಿದ್ದಾರೆ.

ಫೋರ್ಬ್ಸ್​ನ ಅತ್ಯಂತ ಹಿರಿಯ ವಯಸ್ಸಿನ ಬಿಲಿಯನೇರ್​ಗಳ ಪಟ್ಟಿಯಲ್ಲಿ ಕೇಶಬ್ ಅಗ್ರಸ್ಥಾನ ಪಡೆದಿದ್ದರು. ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪವನ್ ಗೋಯಂಕಾ, ಔದ್ಯಮಿಕ ಜಗತ್ತು ಇವತ್ತು ಅತ್ಯುತ್ತಮ ವ್ಯಕ್ತಿತ್ವವನ್ನು ಕಳೆದುಕೊಂಡಿತು ಎಂದು ಹೇಳಿದ್ದಾರೆ. ಕಂಪನಿಯ ವಕ್ತಾರರು ಪ್ರತ್ಯೇಕವಾಗಿ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್​ನ ಹಾಲಿ ಛೇರ್ಮನ್ ಆನಂದ್ ಮಹೀಂದ್ರ ಕುಟುಂಬ ವರ್ಗದ ಹಿರಿಯರಾದ ಕೇಶಬ್ ಮಹೀಂದ್ರ 1947ರಲ್ಲಿ ಈ ಕಂಪನಿಗೆ ಸೇರಿದ್ದರು. 1963ರಲ್ಲಿ ಅವರು ಛೇರ್ಮನ್ ಆದರು. ಅಮೆರಿಕದ ಪೆನ್​ಸಿಲ್ವೇನಿಯಾ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ಅವರು ಸಾಯುವ ಮುನ್ನ ಸಂಸ್ಥೆಯ ಗೌರವ ಛೇರ್ಮನ್ ಸ್ಥಾನದಲ್ಲಿ ಮುಂದುವರಿದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!