ಎಷ್ಟು ಜೊತೆ ಒಳ ಉಡುಪುಗಳಿದ್ದರೂ ಹಾಕೋದು ಮಾತ್ರ ಅದೇ ನಾಲ್ಕನ್ನು! ಅಂದ ಚಂದಕ್ಕಿಂತ ಕಂಫರ್ಟ್ ಮುಖ್ಯ ಅನ್ನೋ ಕಾನ್ಸೆಪ್ಟ್ ಅರ್ಥವಾಗೋದೇ ಇಲ್ಲ.ಹರಿದು ಹೋಗಿದ್ದರೂ, ಬಣ್ಣ ಬಿಟ್ಟಿದ್ದರೂ, ತೂತ ಆಗಿದ್ದರೂ ಅದೇ ಇನ್ನರ್ ವೇರ್ ನ್ನೇ ಮತ್ತೆ ಮತ್ತೆ ಹೊಲಿದು ವರ್ಷಾನುಗಟ್ಟಲೆ ಬಳಸ್ತಾರೆ. ಆದರೆ ಇದು ಒಕೆ ನಾ ? ಇದರಿಂದ ತೊಂದರೆ ಇಲ್ವಾ ? ಇಲ್ಲಿದೆ ಮಾಹಿತಿ..
ಇನ್ನರ್‌ವೇರ್‌ಗಳನ್ನು ಯಾವಾಗ ಬದಲಿಸಬೇಕು?
ಇದೆಂಥಾ ಪ್ರಶ್ನೆ ಇನ್ನರ್‌ವೇರ್‌ಗಳನ್ನು ದಿನಾ ಬದಲಾಯಿಸಬೇಕು ಎಂದು ಯೋಚನೆ ಮಾಡಿದ್ರಿ ಅಲ್ವಾ? ಹಾಗಲ್ಲ, ಸಂಪೂರ್ಣವಾಗಿ ನಿಮ್ಮ ಕಬೋರ್ಡ್‌ನಲ್ಲಿ ಇರುವ ಇನ್ನರ್‌ವೇರ್‌ಗಳನ್ನು ಎಸೆದು ಹೊಸತನ್ನು ಯಾವಾಗ ಖರೀದಿ ಮಾಡಬೇಕು ಎನ್ನುವ ಬಗ್ಗೆ ಆಲೋಚಿಸೋಣ.
ಪ್ರತಿ ಆರು ತಿಂಗಳಿನಿಂದ ಹನ್ನೆರಡು ತಿಂಗಳು ಮಾತ್ರ ಒಂದೇ ಒಳ ಉಡುಪುಗಳನ್ನು ಬಳಸಬೇಕು, ನಿಮ್ಮ ಅಂಡರ್‌ವೇರ್‌ನ್ನು ವರ್ಷದ ನಂತರ ಯಾವ ಕಾರಣಕ್ಕೂ ಬಳಸಬೇಡಿ.
ಬ್ಯಾಕ್ಟೀರಿಯಾಗಳ ಹಾವಳಿ ಹೆಚ್ಚಾಗಿ ಆರೋಗ್ಯಕ್ಕೆ ತೊಂದರೆಯಾಗುತ್ತದೆ.