ಪಾಕ್ ಮಾಜಿ ಪ್ರಧಾನಿ ಖಾನ್ ನ ಮಾಜಿ ಪತ್ನಿಗೆ ಮೂರನೇ ಮದುವೆ: ವಯಸ್ಸು ವ್ಯತ್ಯಾಸ ಎಷ್ಟು ಗೊತ್ತೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮಾಜಿ ಪತ್ನಿ ರೆಹಮ್‌ ಖಾನ್‌ ಮೂರನೇ ಮದುವೆಯಾಗಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾಡೆಲ್ ಮತ್ತು ನಟ ಮಿರ್ಜಾ ಬಿಲಾಲ್ ಬೇಗ್ ಅವರನ್ನು ವಿವಾಹವಾಗಿರುವ ರೆಹಮ್‌ ಖಾನ್‌ ಹೇಳಿಕೊಂಡಿದ್ದಾರೆ. ಅದ್ರಲ್ಲೂ ತನಗಿಂತ 13 ವರ್ಷ ಕಿರಿಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಕುರಿತು ಟ್ವಿಟ್ ಮಾಡಿ ಖುಷಿ ಹಂಚಿಕೊಂಡ ರೆಹಮ್‌, ಮಿರ್ಜಾ ಬಿಲಾಲ್‌ ಪೋಷಕರು ಮತ್ತು ನನ್ನ ಮಗ ನನ್ನ ವಕೀಲ್ ಆಶೀರ್ವಾದದೊಂದಿಗೆ ನಾವು ಸಿಯಾಟಲ್‌ನಲ್ಲಿ ವಿವಾಹವಾಗಿದ್ದೇವೆ ಎಂದು ತಿಳಿಸಿದ್ದಾರೆ.

ರೆಹಮ್‌ ಖಾನ್‌ಗೆ 49 ಹಾಗೂ ಮಿರ್ಜಾ ಬಿಲಾಲ್‌ಗೆ 36 ವಯಸ್ಸು. ಯುಎಸ್ ಮೂಲದ ಕಾರ್ಪೊರೇಟ್ ವೃತ್ತಿಪರ ಮತ್ತು ಮಾಜಿ ಮಾಡೆಲ್ ಮಿರ್ಜಾ ಬಿಲಾಲ್ ಬೇಗ್ ಅವರಿಗೂ ಇದು ಮೂರನೇ ವಿವಾಹವಾಗಿದೆ.

1993ರಲ್ಲಿ ಇಜಾಜ್‌ ರೆಹಮಾನ್‌ ಅವರೊಂದಿಗೆ ರೆಹಮ್‌ ವಿವಾಹವಾಗಿದ್ದರು. ನಂತರ 2015 ರಲ್ಲಿ ರೆಹಮ್ ಖಾನ್, ಇಮ್ರಾನ್ ಖಾನ್ ಅವರೊಂದಿಗೆ ಇಸ್ಲಾಮಾಬಾದ್ ಮನೆಯಲ್ಲಿ ವಿವಾಹವಾಗಿದ್ದರು. ಆದರೆ 10 ತಿಂಗಳ ನಂತರ ಅವರಿಗೆ ವಿಚ್ಛೇದನ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!