ಉತ್ತರ ಪ್ರದೇಶದ ಸರ್ಕಾರಿ ಬಸ್​ನ ಮೊದಲ ಮಹಿಳಾ ಚಾಲಕಿ ಪ್ರಿಯಾಂಕಾ ಶರ್ಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಅದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಮಹಿಳೆಯರ ವಿಶೇಷ ಸಾಧನೆ.

ಅದರಲ್ಲೂ ಪ್ರಿಯಾಂಕಾ ಶರ್ಮಾ ಎಂಬಾಕೆ ಉತ್ತರ ಪ್ರದೇಶ ಸರ್ಕಾರದಿಂದ ನೇಮಕವಾದ 26 ಸರ್ಕಾರಿ ಮಹಿಳಾ ಬಸ್​ ಚಾಲಕಿಯರಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (UPSRTC)ಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡು ಪ್ರಿಯಾಂಕಾ ಶರ್ಮಾ ಅವರು ಮೊದಲ ಮಹಿಳಾ ಬಸ್​ ಡ್ರೈವರ್​ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ನನ್ನ ಗಂಡ ಅತಿಯಾದ ಕುಡಿತದ ಚಟದಿಂದ ಮದುವೆಯಾದ ಕೆಲವೇ ವರ್ಷದಲ್ಲಿ ಮೃತಪಟ್ಟರು. ಇಬ್ಬರು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನ ಮೇಲೆ ಬಿತ್ತು. ಒಳ್ಳೆಯ ಅವಕಾಶಗಳಿಗಾಗಿ ನಾನು ದೆಹಲಿಗೆ ಸ್ಥಳಾಂತರವಾಗಿದ್ದೆ. ಆರಂಭದಲ್ಲಿ ಒಂದು ಕಾರ್ಖಾನೆಯಲ್ಲಿ ಸಹಾಯಕಳಾಗಿ ಕೆಲಸ ಗಿಟ್ಟಿಸಿಕೊಂಡಿದ್ದೆ. ಆದರೆ, ನಂತರದಲ್ಲಿ ಡ್ರೈವರ್​ ಆಗಿ ಕೆಲಸ ಪಡೆದುಕೊಂಡೆ. ಡ್ರೈವಿಂಗ್​ ಕೋರ್ಸ್​ ಮುಗಿಸಿದ ಬಳಿಕ ಮುಂಬೈಗೆ ಸ್ಥಳಾಂತರವಾದೆ. ಅಲ್ಲದೆ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಂತಹ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಾ ಕೆಲಸ ಮಾಡಿದೆ ಎಂದು ಕಷ್ಟದ ಕ್ಷಣಗಳನ್ನು ತೆರೆದಿಟ್ಟಿದ್ದಾರೆ.

ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಮಹಿಳೆಯರಿಗೆ ಚಾಲಕಿಯರಾಗುವ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಪ್ರಿಯಾಂಕಾ ಧನ್ಯವಾದ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!