NEET-MDS 2022ರ ಪರೀಕ್ಷೆ, ಇಂಟರ್ನ್​ಶಿಪ್ ಅವಧಿಯ ದಿನಾಂಕ ಮುಂದೂಡಿದ ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

NEET-MDS 2022ರ ಪರೀಕ್ಷೆಯನ್ನು ನಾಲ್ಕರಿಂದ ಆರು ವಾರಗಳ ಕಾಲ ವಿಸ್ತರಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರ್ಧರಿಸಿದ್ದು, ಇದರ ಜೊತೆಯಲ್ಲಿ ಪರೀಕ್ಷೆಯ ಪ್ರವೇಶಕ್ಕೆ ಅಗತ್ಯವಿರುವ ಇಂಟರ್ನ್​ಶಿಪ್​ ಪೂರ್ಣಗೊಳಿಸುವ ಅವಧಿಯನ್ನೂ ಮುಂದೂಡಿರುವುದಾಗಿ ಕೇಂದ್ರ ಸಚಿವಾಲಯ ಹೇಳಿದೆ.
ಈ ಹಿಂದೆ ಪ್ರವೇಶ ಪರೀಕ್ಷೆಗೆ ಹಾಜರಾಗವವರಿಗೆ ಮಾರ್ಚ್ 31ರ ಒಳಗಾಗಿ ಇಂಟರ್ನ್​ಶಿಪ್​ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಇದೀಗ ಮಾರ್ಚ್​ 31ರ ಬದಲಾಗಿ ಜುಲೈ 31ರವರೆಗೆ ವಿಸ್ತರಿಸಲಾಗಿದೆ.
NEET-MDA ಪರೀಕ್ಷೆಯನ್ನು ಮಾರ್ಚ್ 6, 2022 ರಂದು ನಡೆಸಬೇಕಿತ್ತು. ಆದರೆ ಈಗ ಈ ಅವಧಿಯನ್ನು ವಿಸ್ತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!