ಯುಜಿಸಿಯಿಂದ ಕರಾಮುಕ್ತ ವಿವಿಗೆ ಅತ್ಯುತ್ತಮ ಶ್ರೇಯಾಂಕ

ಹೊಸದಿಗಂತ ವರದಿ,ಮೈಸೂರು:

ಮೈಸೂರಿನ ಮುಕ್ತಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ-ದೂರ ಶಿಕ್ಷಣ ಸಂಸ್ಥೆಯವರು ದೇಶದ ದೂರ ಶಿಕ್ಷಣ ವಿಶ್ವವಿದ್ಯಾನಿಲಯಗಳ ಮೌಲ್ಯಮಾಪನದಲ್ಲಿ ಅತ್ಯುತ್ತಮ ಶ್ರೇಯಾಂಕ ನೀಡಿದ್ದಾರೆ. ಅಲ್ಲದೆ
ಕರಾಮುವಿ ಮಾಡುತ್ತಿರುವ ಶೈಕ್ಷಣಿಕ ಆಡಳಿತಾತ್ಮಕ ಕಾರ್ಯಗಳಿಗೆ ಯುಜಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟು 400 ಅಂಕದಲ್ಲಿ 300 ಅಂಕ ಕರಾಮುವಿಗೆ ಲಭಿಸಿದೆ. ಅದರಲ್ಲಿ ಅಧ್ಯಾಪಕರ ಶ್ರೇಣಿಗೆ 20ಕ್ಕೆ 19.85% ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರದ ಕಾರ್ಯಗಳಿಗೆ 10 ಕ್ಕೆ 09 ಅಂಕ ಸಿಕ್ಕಿದೆ. ದಾಖಲಾತಿ ಮತ್ತು ಶುಲ್ಕಗಳಿಗೆ ಸಂಬAಧಿಸಿದAತೆ 20 ಕ್ಕೆ 20 ಅಂಕಗಳು ದೊರಕಿದೆ.
ಒಟ್ಟಾರೆ ಕರಾಮುವಿ `ಅತ್ಯುತ್ತಮ’ ಶ್ರೇಯಾಂಕ ಲಭಿಸಿದೆ. ಕಳೆದ ಮೂರು ವರ್ಷಗಳಲ್ಲಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರ ದೂರದರ್ಶಿತ್ವ ಆಡಳಿತ ಹಾಗೂ ವಿದ್ಯಾರ್ಥಿ ಶ್ರೇಯೋಭಿವೃದ್ಧಿಗೆ ಸಂದ ಗರಿಮೆಯಾಗಿದೆ ಎಂದು ಕರಾಮುವಿ ಸಿಐಕ್ಯೂಎ ನಿರ್ದೇಶಕ ಡಾ. ಎಸ್. ನಿರಂಜನ್‌ರಾಜ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!