ಕೂದಲು ಸಿಕ್ಕಾಪಟ್ಟೆ ಉದುರುತ್ತಿದೆ, ತಲೆಯೆಲ್ಲಾ ಖಾಲಿ ಖಾಲಿ ಕಾಣಿಸುತ್ತಿದೆ ಹೀಗೆ ಆದರೆ ಇನ್ನು ಕೆಲವೇ ವರ್ಷಗಳಲ್ಲಿ ತಲೆ ಖಾಲಿಯಾಗುತ್ತದೆ ಅನ್ನೋ ಭಯನಾ? ಈ ಮೂರು ಸಪ್ಲಿಮೆಂಟ್‌ಗಳ ಬಗ್ಗೆ ಗಮನ ಇಡಿ..
ವಿಟಮಿನ್ ಇ ಮಾತ್ರೆ
ಸೂರ್ಯಕಾಂತಿ ಬೀಜ, ಬಾದಾಮಿ, ಮೀನು, ಹೇಝಲ್‌ನಟ್, ಶೇಂಗಾಬೀಜ, ಆಲಿವ್ ಆಯಿಲ್, ಬ್ರೊಕೊಲಿ, ಪಾಲಕ್, ಪ್ರಾನ್ಸ್, ಅವಕಾಡೋ ಹಾಗೂ ಬೂದುಗುಂಬಳಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
ವಿಟಮಿನ್ ಸಿ ಕ್ಯಾಪ್ಸುಲ್ಸ್
ವಿಟಮಿನ್ ಸಿ ಮಾತ್ರೆಗಳನ್ನು ದಿನವೂ ಸೇವಿಸಿ ಇಲ್ಲವಾದಲ್ಲಿ ಕೋಸು, ಆರೆಂಜ್, ಬೆಲ್ ಪೆಪ್ಪರ್ಸ್, ಕಿವಿ, ಚಕ್ಕೋತಾ, ಹೂಕೋಸು, ಸ್ಟ್ರಾಬೆರಿ, ಮ್ಯಾಂಗೋ ಹಾಗೂ ಬಾಳೆಹಣ್ಣನ್ನು ಡಯಟ್‌ನಲ್ಲಿ ಸೇರಿಸಿ
ಒಮೆಗಾ ತ್ರೀ ಫ್ಯಾಟಿ ಆಸಿಡ್ಸ್
ಇದರ ಮಾತ್ರೆಗಳನ್ನು ಸಪ್ಲಿಮೆಂಟ್ ಆಗಿ ಬಳಸಿ ಇಲ್ಲವೇ ಅಗಸೆ ಬೀಜ,ನವಣೆ, ಮೀನು, ವಾಲ್‌ನಟ್, ಆಯ್‌ಸ್ಟರ್, ಬಾಂಗಡೆ ಮೀನು ಸೇವಿಸಿ
ಯಾವುದೇ ಮಾತ್ರೆಗಳನ್ನು ಸೇವಿಸುವ ಮುನ್ನ ವೈದ್ಯರ ಬಳಿ ಕೇಳಿನೋಡಿ.. ನಿಮ್ಮ ದೇಹಕ್ಕೆ ನಿಮ್ಮ ಆರೋಗ್ಯಕ್ಕೆ ಇದು ಸೆಟ್ ಆಗುತ್ತದೆಯೇ ಪರೀಕ್ಷಿಸಿ.