ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಕ್ರಮ ಹಣ ಸಂಗ್ರಹಣೆ ಮಾಡಲಾಗುತ್ತಿದೆ. ರಾಜ್ಯದ ವಿವಿಧೆಡೆ ಅಕ್ರಮ ಮದ್ಯ ಹಂಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಮೈಸೂರು, ಹಾಸನ ಸೇರಿದಂತೆ ರಾಜ್ಯದ ಹಲವೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಇದೀಗ ರಾಯಚೂರಿನಲ್ಲಿ ಸಿಂಥೆಟಿಕ್ ಎಂಬ ಅಕ್ರಮ ಸೇಂದಿ ದಂಧೆ ನಡೆಸುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ರಾಯಚೂರು ಅಬಕಾರಿ ಇಲಾಖೆ ಹೊಸ ಮಾದರಿಯ ಸಿಂಥೆಟಿಕ್ ಸೇಂದಿ ದಂಧೆ ಪತ್ತೆ ಹಚ್ಚಿದ್ದಾರೆ. ರಾಯಚೂರು ನಗರದ ಗದ್ವಾಲ್ ರಸ್ತೆಯ ಮನೆಯೊಂದರ ಮೇಲೆ ಮುಂಜಾನೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ದಂಧೆ ನಡೆಸುತ್ತಿರುವುದನ್ನು ಪತ್ತೆ ಮಾಡಲಾಗಿದೆ.
200 ಲಿಟರ್ ಸಾಮರ್ಥ್ಯದ 6 ಬ್ಯಾರಲ್ನಲ್ಲಿ ಸೇಂದಿ ಶೇಖರಣೆ ಮಾಡಿ ಇಡಲಾಗಿತ್ತು. ಲಿಟರ್ಗೆ 40-50 ರೂ.ನಂತೆ 1000 ಲಿಟರ್ ಸೇಂದಿ ಸಂಗ್ರಹಿಸಿ ಇಡಲಾಗಿತ್ತು. ಇದನ್ನು ಜಪ್ತಿ ಮಾಡಲಾಗಿದೆ.