MOTHER’S DAY SPECIAL| ತಾಯಂದಿರಿಗೆ ಯಾವ ವ್ಯಾಯಾಮ ಉತ್ತಮ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇ 14, ಇಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಮಕ್ಕಳು ತಮ್ಮ ತಾಯಂದಿರಿಗೆ ಶುಭ ಹಾರೈಕೆಗಳೊಂದಿಗೆ ಉಡುಗೊರೆಗಳನ್ನು ನೀಡಲು ಸಿದ್ಧರಾಗುತ್ತಾರೆ. ತಾಯಿಯು ತನ್ನ ಇಡೀ ಜೀವನವನ್ನು ಮಗುವಿನ ಆರೋಗ್ಯ, ಆರೈಕೆ ಮತ್ತು ಶಿಕ್ಷಣಕ್ಕಾಗಿ ಮುಡಿಪಾಗಿಡುತ್ತಾಳೆ. ಈ ಕಾರ್ಯಗಳ ನಡುವೆ ಆಕೆ ತನ್ನ ಆರೋಗ್ಯದ ಕಡೆಗೆ ಗಮನ ಹರಿಸೋದೇ ಇಲ್ಲ.ವಯಸ್ಸಾದಂತೆ ದೇಹದಲ್ಲಿ ನೋವು, ಹಾರ್ಮೋನುಗಳ ಬದಲಾವಣೆ, ಕೆಲವು ಆರೋಗ್ಯ ಸಮಸ್ಯೆಗಳು, ತೂಕ ಹೆಚ್ಚಾಗುವುದು, ಹೊಟ್ಟೆಯ ಸುತ್ತ ಕೊಬ್ಬು ಶೇಖರಣೆಯಂತಹ ಬದಲಾವಣೆಗಳು ಕಂಡುಬರುತ್ತವೆ.

ಇವೆಲ್ಲವೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಸ್ಲಿಮ್ ಮತ್ತು ಫಿಟ್ ಆಗುವುದು ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅತ್ಯಗತ್ಯ. ತಾಯಂದಿರ ದಿನದಂದು, ನೀವೂ ನಿಮ್ಮ ತಾಯಿಗೆ ಕೆಲ ವ್ಯಾಯಾಮಗಳನ್ನು ಹೇಳಿಕೊಟ್ಟು ಅದನ್ನು ದಿನನಿತ್ಯ ಮಾಡುವಂತೆ ಸೂಚಿಸಿ.

ಲೆಗ್ ಸರ್ಕಲ್ಸ್: ಪ್ರತಿದಿನ ಲೆಗ್ ಸರ್ಕಲ್ ಮಾಡುವುದರಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು. ಹೊಟ್ಟೆಯ ಕೊಬ್ಬು ಕರಗುತ್ತದೆ. ಕಾಲುಗಳು ಮತ್ತು ತೊಡೆಯ ಕೊಬ್ಬು ಕಡಿಮೆಯಾಗುತ್ತದೆ. ಸ್ನಾಯುಗಳು ಬಲಗೊಳ್ಳುತ್ತವೆ. ಈ ವ್ಯಾಯಾಮವನ್ನು ಕನಿಷ್ಠ 15 ಬಾರಿ ಮಾಡಿ.

ಬಟರ್ಫ್ಲೈ ಸಿಟ್ ಅಪ್: ಈ ವ್ಯಾಯಾಮವನ್ನು 15 ಬಾರಿ ಮಾಡಬೇಕು. ಈ ವ್ಯಾಯಾಮವು ಕೋರ್ ಸ್ನಾಯುಗಳನ್ನು ಬಲಪಡಿಸುತ್ತದೆ. ಎಬಿಎಸ್ ಅನ್ನು ಟೋನ್ ಮಾಡಲು ಇದು ಅತ್ಯುತ್ತಮ ವ್ಯಾಯಾಮವಾಗಿದೆ.

ಯೋಗಾಸನ: ಬಹಳ ಸುಲಭ ಇರುವಂತಹ ಆಸನಗಳನ್ನು ನಿಮ್ಮ ತಾಯಿಗೆ ಹೇಳಿಕೊಡಿ. ದಿನನಿತ್ಯ ಬಿಡುವಿನ ಸಮಯದಲ್ಲಿ ಸ್ವಲ್ಪ ಸಮಯ ಮೀಸಲಿಟ್ಟರೂ ಸಾಕು ಅವರ ಆರೋಗ್ಯ ಚೆನ್ನಾಗಿರುತ್ತದೆ.

ಈ ವ್ಯಾಯಾಮವನ್ನು ಯಾರು ಮಾಡಬಾರದು? : ಈ ವ್ಯಾಯಾಮಗಳು ಸ್ನಾಯುಗಳನ್ನು ಬಲಪಡಿಸಲು ಮತ್ತು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತವೆ. ಆದರೆ ಪ್ರತಿಯೊಬ್ಬರೂ ಈ ವ್ಯಾಯಾಮವನ್ನು ಮಾಡಲು ಸಾಧ್ಯವಿಲ್ಲ. ಕುತ್ತಿಗೆ ನೋವು, ಭುಜ ನೋವು ಮತ್ತು ಬೆನ್ನುಮೂಳೆಯ ಸಮಸ್ಯೆ ಇರುವ ಮಹಿಳೆಯರು ಈ ವ್ಯಾಯಾಮ ಮಾಡುವಂತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!