ಮೇಷ
ವೃತ್ತಿಯ ಒತ್ತಡ ಹೆಚ್ಚು. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆಶಾವಾದ ತ್ಯಜಿಸದಿರಿ. ಶೀಘ್ರವೇ ಎಲ್ಲ ಸರಿಯಾಗುವುದು.
ವೃಷಭ
ಇಂದಿನ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸುವಿರಿ. ಅದಕ್ಕೆ ಪೂರಕವಾಗಿ ಇತರರ ಸಹಕಾರವೂ ಸಿಗುವುದು. ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಸಂಭವ.
ಮಿಥುನ
ಕೆಲಸದ ಸಫಲತೆಗೆ ಕೇವಲ ಅದೃಷ್ಟ ನಂಬಿ ಕೂರಬೇಡಿ. ಪ್ರಯತ್ನವೂ ಮುಖ್ಯ. ಮಾಡಿ. ಕುಟುಂಬ ಸದಸ್ಯರ ಬೆಂಬಲ ನಿಮ್ಮ ಉತ್ಸಾಹ ಹೆಚ್ಚಿಸುವುದು.
ಕಟಕ
ಭಾವನಾತ್ಮಕ ವಿಚಾರವೊಂದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ವಿವೇಕಯುತ ನಿರ್ಧಾರ ಅಸಾಧ್ಯವಾದೀತು.
ಸಿಂಹ
ನಿಮ್ಮ ಮನಸ್ಥಿತಿ ಇಂದು ಸರಿಯಾಗಿ ಇಲ್ಲದಿರುವುದರಿಂದ ವೃತ್ತಿಯಲ್ಲಿ ಉದಾಸೀನ ತೋರುವಿರಿ. ಹಣಕಾಸು ವಿಚಾರದಲ್ಲಿ ಎಚ್ಚರ ತಪ್ಪದಿರಿ.
ಕನ್ಯಾ
ಆರೋಗ್ಯ ಸಮಸ್ಯೆ ಪರಿಹಾರ. ಆರ್ಥಿಕ ಬಿಕ್ಕಟ್ಟು ನಿವಾರಣೆ. ಖರೀದಿಯ ಯೋಜನೆ ಇದ್ದರೆ ಅದರಲ್ಲಿ ಮುಂದುವರಿಯಿರಿ. ಎಲ್ಲವೂ ಸುಗಮ.
ತುಲಾ
ಮನೆಯಲ್ಲಿ ಹೊಂದಾಣಿಕೆ ಮುಖ್ಯ. ಅದರಿಂದ ಸಂಬಂಧ ಕೆಡದೆ ಉಳಿಯುವುದು. ಇಂದು ಖರ್ಚು ಹೆಚ್ಬಬಹುದು. ಸಾಲ ಕೊಟ್ಟರೆ ಮರಳಿ ಸಿಗುವುದು ಅನುಮಾನ.
ವೃಶ್ಚಿಕ
ಸಣ್ಣಪುಟ್ಟ ಜಗಳದ ವೇಳೆ ತಾಳ್ಮೆ ವಹಿಸಿ. ವಿಕೋಪಕ್ಕೆ ಕೊಂಡೊಯ್ಯದಿರಿ. ಅನವಶ್ಯ ವಸ್ತು ಖರೀದಿಯ ಮೂಲಕ ಹಣ ವ್ಯಯ ಮಾಡುವುದನ್ನು ನಿಲ್ಲಿಸಿ.
ಧನು
ದೈಹಿಕ ಸಮಸ್ಯೆ ಕಾಡಲಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ಸೇವಿಸಿ. ಸಾಂಸಾರಿಕ ಸಮಸ್ಯೆ ನಿಮ್ಮ ಮನಸ್ಥಿತಿ ಹಾಳು ಮಾಡಬಹುದು. ಆರ್ಥಿಕ ಒತ್ತಡ.
ಮಕರ
ನಿಮ್ಮ ಬದುಕಿನಲ್ಲಿ ಕೆಲವು ಬದಲಾವಣೆ ಅಗತ್ಯ. ಏಕತಾನತೆಯಿಂದ ಹೊರಬನ್ನಿ. ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯದಿರಿ. ಉತ್ತಮ ಫಲ ಸಿಗಲಿದೆ.
ಕುಂಭ
ವೃತ್ತಿಯ ಒತ್ತಡದಿಂದ ಹೊರಬಂದು ಇತರ ವಿಷಯಗಳತ್ತ ಗಮನ ಹರಿಸಿ. ಮನಸ್ಸು ಉಲ್ಲಾಸಗೊಳಿಸುವ ಚಟುವಟಿಕೆಯಲ್ಲಿ ತೊಡಗಿರಿ.
ಮೀನ
ಮಾನಸಿಕವಾಗಿ ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾದೀತು. ಸವಾಲು ಎದುರಿಸಲು ಸಿದ್ಧರಾಗುವಿರಿ. ಸಂಕಷ್ಟ ಪರಿಹಾರದ ಹಾದಿ ತೋರಿಬರಲಿದೆ.