Exit Polls 2022: ಕಡಲತಡಿ ಗೋವಾದಲ್ಲಿ ಮತ್ತೆ ಬಿಜೆಪಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋವಾದಲ್ಲಿ ಮತ್ತೆ ಬಿಜೆಪಿ ಬಹುಮತದ ಸ್ಥಾನಗಳನ್ನ ಗೆಲ್ಲಲಿದೆ ಎಂದು ಸಿಎನ್ ಎಕ್ಸ್-ಇಂಡಿಯಾ ಟಿವಿ ಎಕ್ಸಿಟ್ ಪೋಲ್ ಸಮೀಕ್ಷೆ ಹೇಳಿವೆ.
ಇಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಡುವೆ ತ್ರೀವ ಪೈಪೋಟಿ ಇದ್ದು, ಅಂತಿಮವಾಗಿ ಬಿಜೆಪಿ ಬಹುಮತ ಪಡೆಯಲಿದೆ ಎಂದು ಹೇಳಿದೆ.
ಇನ್ನು ಕೆಲವು ಸಮೀಕ್ಷೆಗಳು ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆ ಇಲ್ಲ ಎಂದಿವೆ.
ಸಿಎನ್ ಎಕ್ಸ್ ಸಮೀಕ್ಷೆ ಪ್ರಕಾರ, ಗೋವಾದ 40 ಸ್ಥಾನಗಳಲ್ಲಿ ಬಿಜೆಪಿಗೆ 16-22 ಸ್ಥಾನಗಳು, ಕಾಂಗ್ರೆಸ್ 11-17 ಸ್ಥಾನಗಳು ಮತ್ತು ಎಎಪಿ 0-2 ಸ್ಥಾನಗಳನ್ನ ಬಾಚಿಕೊಳ್ಳಲಿವೆ.
ನ್ಯೂಸ್‌ಎಕ್ಸ್-ಪೋಲ್ಸ್ಟ್ರಾಟ್ ಪ್ರಕಾರ ಬಿಜೆಪಿಗೆ 17-19 ಸ್ಥಾನಗಗು, ಕಾಂಗ್ರೆಸ್ 11-13 ಸ್ಥಾನಗಳನ್ನು ಪಡೆಯಬಹುದು .
ಇಲ್ಲಿ 21 ಮ್ಯಾಜಿಕ್ ಸಂಖ್ಯೆಯಾಗಿವೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!