ಕಾರ್ಯಕರ್ತರು, ಮುಖಂಡರ ಪ್ರಯತ್ನದಿಂದ ನಿರೀಕ್ಷಿತ ಗೆಲುವು: ಜಿ.ಎಸ್.ಪಾಟೀಲ

ಹೊಸ ದಿಗಂತ ವರದಿ, ಗದಗ:

ಕಾರ್ಯಕರ್ತರು, ಮುಖಂಡರ ಪ್ರಯತ್ನದಿಂದ ನಿರೀಕ್ಷಿತ ಗೆಲವು ಕಂಡಿದೆ ಎಂದು ರೋಣ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಅವರು ಹೇಳಿದರು.

ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಮುಗಿದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿ, ಜನರ ಮೈಂಡ್‌ಸೆಟ್‌ನ್ನು ಯಾರೂ ಬದಲು ಮಾಡಲು ಸಾಧ್ಯವಿಲ್ಲ. ಬಿಜೆಪಿಯ ದುರಾಡಳಿತ ಜನರ ಮನದಲ್ಲಿ ಮೂಡಿದ್ದರಿಂದ ಬಹುಮತದ ಬಗ್ಗೆ ನಿರೀಕ್ಷೆ ಇತ್ತು. ಅಲ್ಲದೆ, ಸಮೀಕ್ಷೆಗಳು ಬಹುಮತ ಬರುವದಿಲ್ಲ ಎನ್ನುತ್ತಿದ್ದರು ಎಲ್ಲವನ್ನೂ ಮೀರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.

ನಾನು ಸಚಿವ ಆಗಬೇಕು ಎಂದು ಕಾರ್ಯಕರ್ತರ ಮನಸ್ಸಿನಲ್ಲಿದೆ.ಆದರೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನಿರ್ಧಾರ ತೆಗೆದುಕೊಂಡಂತೆ ನಡೆದುಕೊಳ್ಳುತ್ತೆನೆ.
ಬಡವರಿಗಾಗಿ ಕೆಲ ಕಾರ್ಯಕ್ರಮ ತಂದಿದ್ದೇವೆ. ಅವುಗಳನ್ನು ಅನುಷ್ಠಾನಕ್ಕೆ ಬರಬೇಕು ಎಂದು ಜಿ.ಎಸ್.ಪಾಟೀಲ ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!