ಶಾರುಖ್‌ ಬಳಿ ದುಬಾರಿ ವಾಚ್‌ ಪತ್ತೆ: ಏರ್‌ಪೋರ್ಟ್‌ನಲ್ಲೇ ಬರೋಬ್ಬರಿ 6.87 ಲಕ್ಷ ರೂ. ತೆರಿಗೆ ಕಟ್ಟಿದ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಎಇಯಿಂದ (UAE) ಭಾರತಕ್ಕೆ ವಾಪಸ್‌ ಆಗುವಾಗ ವೇಳೆ ದುಬಾರಿ ವಾಚ್‌ಗಳನ್ನು ಹೊಂದಿದ್ದ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ತಡೆಡಿದ್ದಾರೆ.

ಶಾರುಖ್ ಖಾನ್‌ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ತಡೆದು ಸುಮಾರು ಒಂದು ಗಂಟೆ ಕಾಲ ಪರಿಶೀಲನೆ ನಡೆಸಿದ್ದು, . ಈ ವೇಳೆ ನಟನ ಬ್ಯಾಗ್‌ನಲ್ಲಿ ಸುಮಾರು 18 ಲಕ್ಷ ರೂ. ಮೌಲ್ಯದ ದುಬಾರಿ ವಾಚ್‌ಗಳು ಪತ್ತೆಯಾಗಿವೆ.

ಈ ಹಿನ್ನೆಲೆಯಲ್ಲಿ ಆ ವಾಚ್‌ಗಳಿಗೆ 6.87 ಲಕ್ಷ ರೂ. ತೆರಿಗೆಯನ್ನು ಶಾರುಖ್‌ ಖಾನ್‌ ಪಾವತಿಸಿದ್ದಾರೆ.

ಶಾರುಖ್ ಜೊತೆಗೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಅಂಗರಕ್ಷಕ ರವಿ ಸೇರಿದಂತೆ ಅವರ ಸಿಬ್ಬಂದಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಮುಂಬೈಗೆ ಖಾಸಗಿ ಜೆಟ್‌ ಮೂಲಕ ಹಿಂತಿರುಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಖಾನ್ ಯುಎಇಗೆ ತೆರಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!