ಕಾರು ಮೇಲೆ ಕುಳಿತು ಸಂಚಾರ: ನಟ ಪವನ್ ಕಲ್ಯಾಣ್ ವಿರುದ್ಧ FIR ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವಾರ ಪವನ್ ಕಲ್ಯಾಣ್ ಹಾಗೂ ಅವರ ಬೆಂಬಲಿಗರು ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿದ್ದದ್ದು, ಈ ವೇಳೆ ಪವನ್ ಕಲ್ಯಾಣ್ ಕಾರಿನ ಮೇಲೆ ಕುಳಿತ ವಿಡಿಯೋ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ಸಂಕಷ್ಟ ತಂದಿಟ್ಟಿದೆ.

ನಟ , ರಾಜಕಾರಣಿ ಪವನ್ ಕಲ್ಯಾಣ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಅತಿವೇಗದ ಚಾಲನೆ ಹಾಗೂ ಇತರರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇರೆಗೆ ಎಫ್ ಐ ಆರ್ ದಾಖಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅತಿವೇಗದ ಚಾಲನೆ , ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅತಿವೇಗದ ಚಾಲನೆ , ಸಾರ್ವಜನಿಕ ಮಾರ್ಗದಲ್ಲಿ ಸವಾರಿ ಮಾಡುವುದು) ಮತ್ತು 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಾನೆಟ್ ಮೇಲೆ ಕುಳಿತಿದ್ದ ಪವನ್ ಕಲ್ಯಾಣ್ ಎಸ್ಯುವಿ ಕಾರನ್ನು ಅಜಾಗರೂಕತೆಯಿಂದ ಓಡಿಸಿದ್ದಾರೆ ಮತ್ತು ಹಲವಾರು ಕಾರುಗಳು ಮತ್ತು ಮೋಟಾರ್ ಸೈಕಲ್ ಗಳಲ್ಲಿ ಬೆಂಬಲಿಗರೊಂದಿಗೆ ಚಲಾಯಿಸಿದ್ದು ಇದರಿಂದ ಮೋಟಾರ್ ಸೈಕಲ್ ನಿಯಂತ್ರಣವನ್ನು ಕಳೆದುಕೊಂಡಿದ್ದರಿಂದ ತಾನು ರಸ್ತೆಯ ಮೇಲೆ ಬಿದ್ದಿದ್ದೇನೆ ಎಂದು ಶಿವಕುಮಾರ್ ಎಂಬುವವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!