HEALTH| ಡೈರಿ ಬರೆಯುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡೈರಿ(ದಿನಚರಿ) ಬರೆಯುವುದು ಒಂದು ಕಾಲದಲ್ಲಿ ಅನೇಕರ ಹವ್ಯಾಸವಾಗಿತ್ತು. ಇಂದಿಗೂ ದಿನಚರಿ ಬರೆಯುವರರಿದ್ದಾರೆ ಆದರೆ, ತೀರಾ ವಿರಳ. ಕಾರಣ ಇದು ಡಿಜಿಟಲ್ ಯುಗವಾದ್ದರಿಂದ ಅವರ ದೈನಂದಿನ ಜೀವನದ ಪ್ರತಿಯೊಂದು ಅಂಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದರಲ್ಲೇ ಬ್ಯುಸಿಯಾಗಿರುವ ಜನ ದಿನಚರಿ ಬರೆಯುವುದು ಸ್ವಲ್ಪ ಕಷ್ಟವೇ…

ದಿನಚರಿ ಬರೆಯುವುದರಿಂದ ನಮ್ಮ ಜ್ಞಾನಪಶಕ್ತಿ ಹೆಚ್ಚುತ್ತದೆ ಎಂದು ಜರ್ನಲ್ ಆಫ್ ಎಕ್ಸ್‌ಪರಿಮೆಂಟಲ್ ಸೈಕಾಲಜಿ ಸಂಶೋಧನೆಯಿಂದ ಬಹಿರಂಗವಾಗಿದೆ. ಮರೆವು ಎಲ್ಲರಿಗೂ ಇದ್ದೇ ಇರುತ್ತದೆ. ಹೀಗಿರುವಾಗ ದಿನಚರಿ ಬರೆಯುವ ಅಭ್ಯಾಸವಿರುವವರು ನಿದ್ದೆಯಲ್ಲಿದ್ದಾಗಲೂ ನೆನೆಪಿನ ಶಕ್ತಿ ಹೊಂದಿರುತ್ತಾರೆಂದು ಅಧ್ಯಯನ ಹೇಳಿದೆ.

ದಿನಚರಿ ಬರೆಯುವುದರಿಂದ ಆಲೋಚನಾ ಕ್ರಮವೂ ಬದಲಾಗುತ್ತದೆ. ಒಂದು ದಿನ ಡೈರಿ ಬರೆಯುವಾಗ ಇರುವ ಭಾವನೆಗಳು ಮರುದಿನ ಇರುವುದಿಲ್ಲ. ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಮತ್ತು ಅವರ ಭಾವನೆಗಳು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನಮ್ಮ ಡೈರಿಯಲ್ಲಿನ ಬರಹಗಳು ತಿಳಿಸುತ್ತವೆ. ಕೆಲವು ವಿಷಯಗಳ ಬಗ್ಗೆ ನಮ್ಮ ಆಲೋಚನೆಯನ್ನು ಬದಲಾಯಿಸಲು ಸಹ ಇದು ಸಹಾಯ ಮಾಡುತ್ತದೆ.

ಡೈರಿ ಬರೆಯುವ ಅಭ್ಯಾಸವಿರುವವರಲ್ಲಿ ಭಾವನೆಗಳು ನಿಯಂತ್ರಣದಲ್ಲಿರುತ್ತವಂತೆ. ಆಗಿರುವ ತಪ್ಪುಗಳನ್ನು ಬರೆಯುವುದು ನಿಮ್ಮ ಪ್ರಾಮಾಣಿಕತೆಗೆ ನಿದರ್ಶನವಾಗಿರುತ್ತದೆ ಮತ್ತು ತಿದ್ದಿಕೊಳ್ಳಲೂ ಸಹಾಯಮಾಡುತ್ತದೆ. ಯಾವುದೇ ಪರಿಸ್ಥಿತಿಯನ್ನು ಗೊಂದಲವಿಲ್ಲದೆ ಎದುರಿಸುವ ಧೈರ್ಯವನ್ನು ಮನಸ್ಸು ನೀಡುತ್ತದೆ.

ಸೆಲ್ ಫೋನ್‌ಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಕಳೆಯುವುದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಗೊತ್ತಿರುವ ಸಂಗತಿ. ಅವುಗಳನ್ನು ಸ್ವಲ್ಪ ಹೊತ್ತು ಪಕ್ಕಕ್ಕಿಟ್ಟು ದಿನಚರಿ ಬರೆಯುವುದರಿಂದ ಮೆದುಳು ಕ್ರಿಯಾಶೀಲವಾಗಿರುತ್ತದೆ. ಡೈರಿ ಬರೆಯುವುದರಿಂದ ಕೆಲವು ನೆನಪುಗಳನ್ನು ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!