ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿ ಮತ್ತು ಸಿರಿಯಾ ಭೂಕಂಪದಿಂದ ಜರ್ಜರಿತವಾದ ಬೆನ್ನಲ್ಲೇ ಮತ್ತೊಂದು ದುರಂತ ಉಂಟಾಗಿದೆ. ಎಲ್ಲಿ ನೋಡಿದರೂ ಕುಸಿದ ಕಟ್ಟಡ, ರಕ್ತಸಿಕ್ತ ಹೃದಯ ವಿದ್ರಾವಕ ಸನ್ನಿವೇಶಗಳು ಕಂಡುಬರುತ್ತವೆ. ಇದು ಸಾಕಾಗುವುದಿಲ್ಲ ಎಂಬಂತೆ ದಕ್ಷಿಣ ಟರ್ಕಿಯಲ್ಲಿನ ಗ್ಯಾಸ್ ಪೈಪ್‌ಲೈನ್‌ಗಳು ಬ್ಲಾಸ್ಟ್ ಆಗಿವೆ. ಗ್ಯಾಸ್ ಪೈಪ್ ಲೈನ್ ಸೋರಿಕೆಯಾಗಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು.
ದಕ್ಷಿಣ ಟರ್ಕಿಯ ಗಾಜಿಯಾಂಟೆಪ್‌ನಿಂದ ನೈಋತ್ಯಕ್ಕೆ 170 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಭೂಕಂಪದ ತೀವ್ರತೆಗೆ ಬೆಂಕಿ ಕಾಣಿಸಿಕೊಂಡಿದೆ. ಪ್ರದೇಶದಲ್ಲಿ ಅನಿಲ ಮತ್ತು ತೈಲ ಪೈಪ್‌ಲೈನ್‌ಗಳಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭೂಕಂಪದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. 1,000 ಮತ್ತು 10,000 ರ ನಡುವೆ ಇರಬಹುದು ಎಂದು US ಭೂವೈಜ್ಞಾನಿಕ ಸಮೀಕ್ಷೆ ಅಂದಾಜಿಸಿದೆ. USGS ಈ ಪ್ರದೇಶದಲ್ಲಿ ಭೂಕಂಪಗಳ ಇತಿಹಾಸವನ್ನು ಆಧರಿಸಿ ಈ ಮುನ್ಸೂಚನೆಯನ್ನು ಮಾಡುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಲಿದ್ದು, ಅಪಾರ ನಷ್ಟ ಉಂಟಾಗಲಿದೆ.
ಟರ್ಕಿಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದೆ.. 3 ಸಾವಿರಕ್ಕೂ ಹೆಚ್ಚು ಬೃಹತ್ ಕಟ್ಟಡಗಳು ನೆಲಕ್ಕುರುಳಿವೆ. ಅವುಗಳಲ್ಲಿ ವಾಸಿಸುತ್ತಿದ್ದ ಸಾವಿರಾರು ಜನರು ಪ್ರಾಣ ಕಳೆದುಕೊಂಡು ಸೂರಿಲ್ಲದೆ ನಿರ್ಗತಿಕರಾಗಿದ್ದಾರೆ.