ಟರ್ಕಿ-ಸಿರಿಯಾದಲ್ಲಿ 3,600 ಗಡಿ ದಾಟಿದ ಸಾವಿನ ಸಂಖ್ಯೆ: ಅವಶೇಷಗಳಡಿ ಜನರ ಆರ್ತನಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಕೃತಿಯ ಪ್ರಕೋಪದಿಂದಾಗಿ ಟರ್ಕಿ ಮತ್ತು ಸಿರಿಯಾ ದೇಶ ರಕ್ತಸಿಕ್ತವಾಗಿವೆ. ಎರಡೂ ದೇಶಗಳಲ್ಲಿ ಊಹೆಗೂ ನಿಲುಕುದ ದುರಂತ ಸಂಭವಿಸಿದೆ. ಈ ಎರಡು ದೇಶಗಳ ಗಡಿಯಲ್ಲಿ ಸಂಭವಿಸಿದ ಭಾರೀ ಭೂಕಂಪಕ್ಕೆ ಸಾವಿರಾರು ಕಟ್ಟಡಗಳು ನೆಲಸಮವಾಗಿವೆ. ಉಭಯ ದೇಶಗಳಲ್ಲಿ ಇದುವರೆಗೆ 3,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಅಲ್ಲಿನ ಜನ ಭಯದಿಂದಾಗಿ ತಮ್ಮ ಜೀವವನ್ನು ಅಂಗೈಯಲ್ಲಿಟ್ಟುಕೊಂಡಿದ್ದಾರೆ. ಕಟ್ಟಡಗಳಿಂದ ಆಚೆ ಬಂದು ಬೀದಿಗಳಲ್ಲಿ ಕುಳಿತಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಎಲ್ಲೆಂದರಲ್ಲಿ ಕುಸಿದ ಕಟ್ಟಡಗಳು ಕಂಡುಬರುತ್ತಿವೆ. ಎರಡೂ ಪ್ರದೇಶಗಳು ಶವಗಳ ರಾಶಿಯಾಗಿ ಮಾರ್ಪಟ್ಟಿವೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಟರ್ಕಿಯಲ್ಲಿ 2,316 ಜನರು ಮತ್ತು ಸಿರಿಯಾದಲ್ಲಿ 1,293 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಅವಶೇಷಗಳಿಂದ ಕೆಲವು ಮೃತ ದೇಹಗಳನ್ನು ತೆಗೆಯಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, 10,000 ದಾಟಬಹುದು ಎಂದು ಯುಎನ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ನಿನ್ನೆ ಟರ್ಕಿ ಮತ್ತು ಸಿರಿಯಾ ಗಡಿಯಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸತತ ಮೂರು ಭೂಕಂಪಗಳು ಸಂಭವಿಸಿವೆ. ಅವಶೇಷಗಳಡಿಯಲ್ಲಿ ಸಾವಿರಾರು ಮಂದಿ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕಟ್ಟಡಗಳಡಿ ಸಿಲುಕಿರುವ ಆರ್ತನಾದ ಮುಗಿಲು ಮುಟ್ಟಿದೆ.

ಟರ್ಕಿಯಲ್ಲಿ ಸತತ ಕಂಪನದಿಂದಾಗಿ ಜನರು ತಮ್ಮ ಮನೆಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಜನರು ತಮ್ಮ ಹತಾಶೆಯನ್ನು ಬೀದಿಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಅಪಘಾತದ ತೀವ್ರತೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆ ಜನರೆಲ್ಲ ಗಾಢ ನಿದ್ದೆಯಲ್ಲಿರುವಾಗಲೇ ಈ ದುರಂತ ನಡೆದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಟರ್ಕಿಯ ಎಲ್ಲಾ ಹತ್ತು ಪ್ರಾಂತ್ಯಗಳಲ್ಲಿ 3,000 ಕಟ್ಟಡಗಳು ನಾಶವಾಗಿವೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಕ್ಕೆ ಇಡೀ ಜಗತ್ತು ಆಘಾತ ವ್ಯಕ್ತಪಡಿಸಿದೆ. ಆ ದೇಶಗಳಿಗೆ ಸಹಾಯ ಹಸ್ತ ನೀಡಲು ಜಗತ್ತಿನ ದೇಶಗಳು ಮುಂದೆ ಬರುತ್ತಿವೆ. ಭಾರತ ಕೂಡ ಟರ್ಕಿ ನೆರವಿಗೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ವೈದ್ಯಕೀಯ ತಂಡ ಟರ್ಕಿಗೆ ತೆರಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!