ಲಖನೌ ಆಟಗಾರರ ಸ್ಫೋಟಕ ಬ್ಯಾಟಿಂಗ್: ಆರ್‌ಸಿಬಿ ಗೆಲುವಿಗೆ 182 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್‌: 

ಆರ್‌ಸಿಬಿ ವಿರುದ್ಧ ಲಖನೌ ತಂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ 181 ರನ್‌ ಕಲೆಹಾಕಿದೆ.

ಬ್ಯಾಟಿಂಗ್ ಇಳಿದ ಲಖನೌ ಆರಂಭ ಸ್ಫೋಟಕವಾಗಿತ್ತು. ನಾಯಕ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಹೋರಾಟ ಬೃಹತ್ ಮೊತ್ತದ ಸೂಚನೆ ನೀಡಿತ್ತು. ರಾಹುಲ್ 20 ರನ್ ಸಿಡಿಸಿ ಔಟಾದರು.

ರಾಹುಲ್ ಬೆನ್ನಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಪತನಗೊಂಡಿತು. ಪಡಿಕ್ಕಲ್ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ಕಸ್ ಸ್ಟೊಯ್ನಿಸ್ ಹಾಗೂ ಡಿಕಾಕ್ ಜೊತೆಯಾಟ ಲಖನೌ ತಂಡದಲ್ಲಿ ಹೊಸ ಹುರುಪು ತಂದಿತು. ಡಿಕಾಕ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಸ್ಟೊಯ್ನಿಸ್ 24 ರನ್ ಸಿಡಿಸಿ ಔಟಾದರು.

ಅಬ್ಬರಿಸಿದ ಡಿಕಾಕ್ 56 ಎಸೆತದಲ್ಲಿ 81 ರನ್ ಸಿಡಿಸಿದರು. ಡಿಇತ್ತ ಆಯುಷ್ ಬದೋನಿ ಅಬ್ಬರಿಸಲಿಲ್ಲ. ಆದರೆ ಅಂತಿಮ 3 ಓವರ್‌ಗಳಲ್ಲಿ ನಿಕೋಲಸ್ ಪೂರನ್ ಅಬ್ಬರ ಆರಂಭಗೊಂಡಿತು. ಸಿಕ್ಸರ್ ಮೂಲಕ ಪೂರನ್ ಅಬ್ಬರಿಸಿದರು. ಇದು ಲಖನೌ ಸ್ಕೋರ್ ಹೆಚ್ಚಿಸಿತು. ಪೂರನ್ ಅಜೇಯ 40 ರನ್ ಸಿಡಿಸಿದರು. ಈ ಮೂಲಕ ಲಖನೌ 5 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!