ಸ್ಫೋಟಕ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ: ಭಾರತಕ್ಕೆ 207 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ಉತ್ತಮ ಟಾರ್ಗೆಟ್ ಮಾಡಿದೆ. ಕುಸಾಲ್ ಮೆಂಡೀಸ್ ಅರ್ಧಶತಕ, ನಾಯಕ ದಸೂನ್ ಶನಕ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿದೆ. ಭಾರತದ ಗೆಲುವಿಗೆ 207 ರನ್ ಗಳಿಸಬೇಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ಅಬ್ಬರದ ಆರಂಭ ಪಡೆಯಿತು. ಪಥುಮ್ ನಿಸಂಕ ಹಾಗೂ ಕುಸಾಲ್ ಮೆಂಡೀಸ್ ಮೊದಲ ವಿಕೆಟ್‌ಗೆ 80 ರನ್ ಜೊತೆಯಾಟ ನೀಡಿದರು.

31 ಎಸೆತದಲ್ಲಿ ಕುಸಾಲ್ ಮೆಂಡೀಸ್ 52 ರನ್ ಸಿಡಿಸಿ ಔಟಾದರು. ಭಾನುಕ ರಾಜಪಕ್ಸ ಕೇವಲ 2 ರನ್ ಸಿಡಿಸಿ ಔಟಾದರು. ಇತ್ತ ಆರಂಭಿಕ ಪಥುಮ್ ನಿಸಂಕ 33 ರನ್ ಕಾಣಿಕೆ ನೀಡಿದರು.

ಇತ್ತ ಚಾರಿತ್ ಅಸಲಂಕ ಹೋರಾಟ ನೀಡಿದರು. ಆದರೆ ಧನಂಜಯ ಡಿ ಸಿಲ್ವ ಕೇವಲ 3 ರನ್ ಸಿಡಿಸಿ ಔಟಾದರು.
ನಾಯಕ ದಸೂನ್ ಶನಕ ಹಾಗೂ ಚಾರಿತ್ ಅಸಲಂಕ ಹೋರಾಟ ಲಂಕಾ ತಂಡಕ್ಕೆ ನೆರವಾಯಿತು. ಇತ್ತ ಚಾರಿತ್ ಅಸಲಂಕ 37 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ವಾನಿಂಡು ಹಸರಂಗ ಡಕೌಟ್ ಆದರು.

ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ದಸೂನ್ ಶನಕ 20 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಕರಣಾರತ್ನೆ ಅಜೇಯ 11 ರನ್ ಸಿಡಿಸಿದರೆ, ದಸೂನ್ 22 ಎಸೆದಲ್ಲಿ ಅಜೇಯ 56 ರನ್ ಸಿಡಿಸಿದರು. ಅಂತಿಮ ಓವರ್‌ನಲ್ಲಿನ 3 ಸಿಕ್ಸರ್ ಸೇರಿ ಒಟ್ಟು 6 ಸಿಕ್ಸರ್ ಸಿಡಿಸಿ ಮಿಂಚಿದರು. ಈ ಮೂಲಕ ಶ್ರೀಲಂಕಾ ವಿಕೆಟ್ 6 ನಷ್ಟಕ್ಕೆ 205 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!