ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮುವಿನ ಶ್ರೀನಗರ-ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಅನುಮಾನಾಸ್ಪದ ಬ್ಯಾಗ್‌ವೊಂದು ಪತ್ತೆಯಾಗಿದೆ.
ವಿಷಯ ತಿಳಿದ ಕೂಡಲೇ ಪೊಲೀಸರು ಆಗಮಿಸಿದ್ದು, ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಪತ್ತೆಯಾಗಿದೆ.ಅದೃಷ್ಟವಶಾತ್ ಬ್ಯಾಗ್‌ನಲ್ಲಿದ್ದ ವಸ್ತು ಸ್ಪೋಟವಾಗದಂತೆ ಪೊಲೀಸರು, ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ತಡೆದಿದ್ದಾರೆ.
ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಗಿತಗೊಂಡಿದ್ದು, ಬಳಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಸೇನೆಯ ಹಿರಿಯ ಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಹೇಳಿಕೆ ಭಾರತೀಯ ಸೇನೆಯ ಬಿಡುಗಡೆ ಮಾಡಿದ್ದು, ಶ್ರೀನಗರದ ಬಾರಾಮುಲ್ಲಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ಪೊಲೀಸ್ ಸಿಬ್ಬಂದಿ, 29RR ಮತ್ತು CRPF ತಂಡವು ಸ್ಥಳಕ್ಕೆ ಧಾವಿಸಿತು. ಬ್ಯಾಗ್‌ನಲ್ಲಿ ಸ್ಪೋಟಕವಿದೆಯೇ ಇಲ್ಲವೆ ಎಂಬುದರ ಖಚಿತತೆಗಾಗಿ ಬಾಂಬ್ ನಿಷ್ಕ್ರಿಯ ದಳ ಕರೆಸಲಾಯಿತು. ಯಾವುದೇ ಹಾನಿಯಾಗದಂತೆ IED ನಿಷ್ಕ್ರೀಯ ಮಾಡಿ ಬ್ಯಾಗ್ ಅನ್ನು ತೆರವುಗೊಳಿಸಲಾಯಿತು. ಹೆದ್ದಾರಿಯಲ್ಲಿ ಓಡಾಡುವ ಸವಾರರು, ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.