Friday, September 22, 2023

Latest Posts

ಜ್ಞಾನವಾಪಿ ಮಸೀದಿಯೇ ಆಗಿದ್ದಲ್ಲಿ ಅಲ್ಲಿ ತ್ರಿಶೂಲ ಏನು ಮಾಡುತ್ತಿದೆ?: ಯೋಗಿ ಆದಿತ್ಯನಾಥ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜ್ಞಾನವಾಪಿ (Gyanvapi) ಮಸೀದಿ ಮಸೀದಿ ಪ್ರಕರಣ ಸದ್ಯ ಕೋರ್ಟ್ ನಲ್ಲಿದ್ದು, ಹೀಗಾಗಿ ಅನೇಕರು ಈ ಕುರಿತು ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ಹೇಳಲು ಹಿಂದೇಟು ಹಾಕುತ್ತಿದ್ದಾರೆ.

ಆದ್ರೆ ಇದೀಗ ವಿಶೇಷ ಸಂದರ್ಶನವೊಂದರಲ್ಲಿ ಜ್ಞಾನವಾಪಿ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸ್ಪಷ್ಟ ಉತ್ತರ ನೀಡಿದ್ದಾರೆ.

ಮಸೀದಿ ಎಂದು ಕರೆದಾಗಲೇ ವಿವಾದ ಆಗೋದು. ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯೋದು ಬಿಡಿ. ಹಾಗೇನಾದರೂ ಮಸೀದಿಯೇ ಆಗಿದ್ದಲ್ಲಿ ಅಲ್ಲಿ ತ್ರಿಶೂಲ ಯಾಕಿರುತ್ತದೆ ಅನ್ನೋದನ್ನು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

ಮಸೀದಿಯಲ್ಲಿ ತ್ರಿಶೂಲ ಯಾಕಿದೆ ಅನ್ನೋದನ್ನೂ ಪ್ರಶ್ನೆ ಮಾಡ್ತಾರೆ? ನಾವೇನು ಅಲ್ಲಿ ತ್ರಿಶೂಲ ಇಟ್ಟಿದ್ದೇವೆಯೇ. ಜ್ಯೋತಿರ್ಲಿಂಗಗಳು ನಮ್ಮ ದೇವರುಗಳು. ಹಿಂದೆ ತಪ್ಪಾಗಿದೆ. ಇತಿಹಾಸದ ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ವತಃ ಮುಸ್ಲಿಂ ಸಮುದಾಯದಿಂದಲೇ ಇದರ ಪ್ರಸ್ತಾಪ ಬರಬೇಕು. ಈ ಪ್ರಕರಣದ ಇತ್ಯರ್ಥ ಮಾಡುವಲ್ಲಿ ಗಮನವಿಸಬೇಕು ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

 

ಉತ್ತರ ಪ್ರದೇಶದ ಆಡಳಿತವನ್ನು ಕಳೆದ ಆರು ವರ್ಷಗಳಿಂದ ನಿಭಾಯಿಸುತ್ತಿದ್ದೇನೆ. 6 ವರ್ಷಗಳಿಂದ ಯಾವುದೇ ಗಲಭೆ ನಡೆದಿಲ್ಲ. ಯುಪಿ ಮತ್ತು ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗಳು ನಡೆದಿವೆ. ಎಷಷ್ಟು ಭಿನ್ನವಾಗಿ ಚುನಾವಣೆ ನಡೆಯಿತು ಅನ್ನೋದನ್ನು ಎಲ್ಲರೂ ನೋಡಿದ್ದಾರೆ. ಅಲ್ಲಿ ಅಧಿಕಾರದಲ್ಲಿರುವ ಕೆಲವರು ಎಲ್ಲರನ್ನು ಬಲವಂತವಾಗಿ ಬಂಧಿಸಲು ಬಯಸುತ್ತಾರೆ, ಅಲ್ಲಿ ವಿರೋಧ ಪಕ್ಷದ ಜನರನ್ನು ಹೇಗೆ ಕೊಲ್ಲಲಾಯಿತು. ಈ ಬೇಧಭಾವ ಯಾವುದಕ್ಕಾಗಿ ಎಂದು ಪ್ರಶ್ನೆ ಮಾಡಿದ್ದಾರೆ.

ವಿರೋಧ ಪಕ್ಷಗಳ ಹೊಸ ಹೆಸರಾದ ಐಎನ್‌ಡಿಐಎ ಬಗ್ಗೆ ಸಿಎಂ ಯೋಗಿ ಕೂಡ ಪ್ರತಿಕ್ರಿಯಿಸಿದ್ದು, ಐಎನ್‌ಡಿಐಎ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ಬಟ್ಟೆ ಬದಲಾಯಿಸುವುದರಿಂದ ಹಿಂದಿನ ಕರ್ಮಗಳಿಂದ ಮುಕ್ತಿ ಸಿಗುವುದಿಲ್ಲ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!