ಆರ್.ಬಿ.ಐ.ಯಿಂದ ಬ್ಯಾಂಕ್ ಠೇವಣಿ ಲಾಕರ್ ಒಪ್ಪಂದ ನವೀಕರಣ ಗಡುವು ವಿಸ್ತರಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತೀಯ ರಿಸರ್ವ್ ಬ್ಯಾಂಕ್ 2023 ರ ಡಿಸೆಂಬರ್ 31 ರೊಳಗೆ ಸುರಕ್ಷಿತ ಠೇವಣಿ ಲಾಕರ್‌ಗಳ ಒಪ್ಪಂದಗಳ ನವೀಕರಣಕ್ಕೆ ಗಡುವು ವಿಸ್ತರಿಸಿದೆ.

ಪರಿಷ್ಕೃತ ಒಪ್ಪಂದಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಸಹಿ ಹಾಕದಿರುವುದು ಗಮನಕ್ಕೆ ಬಂದಿದ್ದರಿಂದ ಗಡುವನ್ನು ವಿಸ್ತರಿಸಲಾಗಿದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅನೇಕ ಸಂದರ್ಭಗಳಲ್ಲಿ ಬ್ಯಾಂಕ್‌ ಗಳು ಒಪ್ಪಂದವನ್ನು ಪರಿಷ್ಕರಣೆ ಅಗತ್ಯತೆಯ ಬಗ್ಗೆ ಗ್ರಾಹಕರಿಗೆ ತಿಳಿಸುವುದಿಲ್ಲ. ಅಂತೆಯೇ, ಎಲ್ಲಾ ಗ್ರಾಹಕರಿಗೆ ಪರಿಷ್ಕೃತ ಒಪ್ಪಂದ ಅಗತ್ಯತೆಗಳ ಬಗ್ಗೆ 2023 ರ ಏಪ್ರಿಲ್ 30 ರೊಳಗೆ ತಿಳಿಸಲು ಹೇಳಿದೆ. ಜೂನ್ 30 ರೊಳಗೆ ಬ್ಯಾಂಕ್‌ ಗಳು ಕನಿಷ್ಠ 50 ಪ್ರತಿಶತದಷ್ಟು ನೋಂದಣಿಗಳನ್ನು ಮತ್ತು ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇಕಡ 75 ರಷ್ಟು ನೋಂದಣಿಗಳನ್ನು ಪೂರ್ಣಗೊಳಿಸಬೇಕು ಎಂದು ಆರ್‌ಬಿಐ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!