October 15, 2026
Thursday, October 15, 2026
spot_img

HEATWAVE | ಬಿಸಿಲಿಗೆ ಸಾಯ್ತಾ ಇವೆ ಕೋಳಿ-ಮೀನುಗಳು, ಉದ್ಯಮಿಗಳಿಗೆ ಭಾರೀ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಅತಿಯಾಗುತ್ತಿದ್ದು, ಜನರಂತೆಯೇ ಪ್ರಾಣಿ ಪಕ್ಷಿಗಳಿಗೂ ಜೀವನ ಕಷ್ಟವಾಗುತ್ತಿದೆ. ಬಿಸಿಲಿನ ಬೇಗೆಗೆ ಕೋಳಿಗಳು ಹಾಗೂ ಮೀನುಗಳು ಸತ್ತುಹೋಗುತ್ತಿದ್ದು, ಕುಕ್ಕಟೋದ್ಯಮ ಹಾಗೂ ಮೀನು ಮಾರುವವರಿಗೂ ತೊಂದರೆಯಾಗಿದೆ.

ಕೊಪ್ಪಳದಲ್ಲಿ ರಾಜ್ಯದ ಎರಡನೇ ಅತಿ ದೊಡ್ಡ ಮೊಟ್ಟೆ ಹಾಗೂ ಚಿಕನ್‌ ಉತ್ಪಾದನಾ ಕೇಂದ್ರವಿದೆ. ಇಲ್ಲಿ ಕೋಳಿಗಳು ಇದ್ದಕ್ಕಿದ್ದಂತೆಯೇ ಮೃತಪಡುತ್ತಿವೆ. ಕೋಳಿ ಫಾರ್ಮ್‌ ಮಾಲೀಕರು ಕೋಳಿಗಳನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನ ಪಡುತ್ತಿದ್ದಾರೆ. ಆದರೆ ಈ ಪ್ರಯತ್ನ ದುಬಾರಿಯೂ ಆಗಿದೆ.

ಇನ್ನು ಮೀನುಗಳು ಕೂಡ ಬರಬೇಸಿಗೆಗೆ ಬಳಲಿ ಹೋಗಿದ್ದು, ಕೆರೆಗಳಲ್ಲಿ ಮೀನುಗಳು ಮೃತದೇಹ ತೇಲುತ್ತಿದೆ. ಚಿಕ್ಕಬಳ್ಳಾಪುರದ ಕಂದವಾರ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ಇದರಿಂದ ಮೀನುಗಾರರಿಗೆ ಹೊಡೆದ ಬಿದ್ದಂತಾಗಿದೆ.

Must Read