ಕಣ್ಣುನೋವೇ? ಮನೆಯಲ್ಲಿ ಮಾಡಬಹುದಾದ ಪರಿಹಾರಗಳು ಹೀಗಿವೆ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗಂಭೀರ ಸ್ವರೂಪದ ಕಣ್ಮುನೋವಾದರೆ ವೈದ್ಯರ ಸಲಹೆಯೇ ಮದ್ದು. ಆದರೆ, ತೀರ ಸಮಸ್ಯೆಯ ಸ್ವರೂಪದ್ದಲ್ಲ ಎಂಬುದು ಖಾತ್ರಿ ಅನಿಸಿದರೆ ಮೊದಲಿಗೆ ಮನೆಯಲ್ಲೇ ಅನುಸರಿಸಬಹುದಾದ ಕ್ರಮಗಳಿವೆ.

ಇದು ನೈಸರ್ಗಿಕ ಚಿಕಿತ್ಸೆ. ಕಣ್ಣು ಉರಿಯಿಂದ ನರಳುತ್ತಿದ್ದಾಗ ಗರಿಕೆ ಹಾಲಿನ ರಸ, ಕೊಬ್ಬರಿ ಎಣ್ಣೆ ಕಲಸಿಕೊಂಡು ತಲೆಗೆ ಹಚ್ಚಿಕೊಂಡು ಎರಡು ಗಂಟೆಗಳ ನಂತರ ಸ್ನಾನ ಮಾಡಿದರೆ ಕಣ್ಣುನೋವು ಮಾಯ!
ಕಣ್ಣಿನಲ್ಲಿ ಬಾವು ಬಂದು ನೀರು ಸೋರುತ್ತಿದ್ದರೆ ಜಾಲಿಗಿಡದ ಎಲೆಗಳನ್ನು ಅರೆದು ಆ ರಸವನ್ನು ತುಸು ಬೆಚ್ಚಗೆ ಮಾಡಿ ರಣ್ಣು ರೆಪ್ಪೆಯ ಮೇಲೆ ಒಂದೆರಡು ಬಾರಿ ಲೇಪಿಸಿ. ಕಣ್ಣಿನ ತೊಂದರೆ ಮಾಯವಾಗುತ್ತದೆ.
ಕಣ್ಣು ನೋವಿದ್ದರೆ ಅತ್ತಿಗಿಡದ ಹಾಲನ್ನು ಕಣ್ಣು ರೆಪ್ಪೆಯ ಮೇಲೆ ಲೇಪಿಸಿ ಅರ್ಧಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ.
ನೆಲ್ಲಿಕಾಯಿ ರಸದ ಸೇವನೆಯಿಂದ ಅನೇಕ ದೃಷ್ಟಿ ದೋಷಗಳ ನಿವಾರಣೆ ಸಾಧ್ಯ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!