October 18, 2026
Sunday, October 18, 2026
spot_img

ಫೇಸ್‌ಬುಕ್‌ನಿಂದ ಪ್ರಧಾನಿ ಮೋದಿ ವಿಡಿಯೋ ಡಿಲೀಟ್‌: ಟೆಕ್ನಿಕಲ್‌ ಎರರ್‌ ಎಂದು ಕ್ಷಮೆ ಕೇಳಿದ ಮೆಟಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ಮೋದಿ ಅವರು ಪರೀಕ್ಷಾ ಸುಧಾರಣೆ ಕುರಿತಾದ ಭಾಷಣದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಈ ವಿಡಿಯೋವನ್ನು ಭಾರತದಲ್ಲಿ ವೀಕ್ಷಿಸದಂತೆ ಫೇಸ್‌ಬುಕ್‌ ತಾತ್ಕಾಲಿಕವಾಗಿ ನಿರ್ಬಂಧ ಹಾಕಿತ್ತು. ಈ ಬಗ್ಗೆ ಇದೀಗ ಮೆಟಾ ಸ್ಪಷ್ಟನೆ ನೀಡಿದ್ದು, ತಾಂತ್ರಿಕ ದೋಷದಿಂದ ವಿಡಿಯೋ ಡಿಲೀಟ್‌ ಆಗಿದೆ ಕ್ಷಮಿಸಿ ಎಂದು ಕೇಳಿದೆ.

ತಾಂತ್ರಿಕ ದೋಷದಿಂದಾಗಿ ವೀಡಿಯೊವನ್ನು ತಪ್ಪಾಗಿ ತೆಗೆದುಹಾಕಲಾಗಿತ್ತು. ತಕ್ಷಣವೇ ದೋಷವನ್ನು ಸರಿಪಡಿಸಿ ವೀಡಿಯೊವನ್ನು ಮತ್ತೆ ಮರುಸ್ಥಾಪಿಸಲಾಗಿದೆ ಎಂದು ಮೆಟಾ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ವಿದೇಶಿ ಸಾಮಾಜಿಕ ಜಾಲತಾಣ ವೇದಿಕೆಯೊಂದು ಭಾರತದ ಪ್ರಧಾನಿಯವರ ಪೋಸ್ಟ್ ನಿರ್ಬಂಧಿಸಿರುವುದನ್ನು ಕೇಂದ್ರ ಸರ್ಕಾರ ತೀವ್ರವಾಗಿ ಪರಿಗಣಿಸಿದೆ. ಮೆಟಾ ನೀಡಿರುವ ವಿವರಣೆಯನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಮೆಟಾ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸುವ ಸಾಧ್ಯತೆಯಿದೆ.

ಜುಲೈ 23 ರಂದು ಅಪ್‌ಲೋಡ್ ಮಾಡಲಾಗಿದ್ದ ಈ ವೀಡಿಯೊದಲ್ಲಿ, ಜಿರಳೆ ಜನತಾ ಪಕ್ಷ ಆಯೋಜಿಸಿದ್ದ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಜೆನ್​ ಝಿ ಯುವಜನತೆಗೆ ನೀಡಿದ ಮೊದಲ ಸಂದೇಶವಿತ್ತು. ಇದರಲ್ಲಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನು ತರುವುದಾಗಿ ಅವರು ಘೋಷಿಸಿದ್ದರು. ವೀಡಿಯೊವನ್ನು ತಡೆಹಿಡಿಯುವ ಮೊದಲು ಅದು ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿ ಭಾರಿ ಸದ್ದು ಮಾಡಿತ್ತು. ಮೆಟಾ ನಿರ್ಬಂಧವನ್ನು ತೆರವುಗೊಳಿಸಿದ ನಂತರ ಕ್ಲಿಪ್ ಮತ್ತೆ ಸಾರ್ವಜನಿಕರಿಗೆ ಲಭ್ಯವಾಗಿದೆ.

Must Read