September 13, 2026
Sunday, September 13, 2026
spot_img

ಬೆಳಗ್ಗೆ ಮನೆಯಿಂದ ಕೆಲಸ ಮಾಡಿ ಎಂದು ಹೇಳಿ, ಸಂಜೆಗೆ ಕೆಲಸದಿಂದಲೇ ತೆಗೆದುಹಾಕಿದ ಎಫ್‌ಬಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾರ್ಕ್‌ ಜುಕರ್‌ಬರ್ಗ್‌ ನೇತೃತ್ವದ ಫೇಸ್‌ಬುಕ್‌ನಲ್ಲಿ 8000 ಉದ್ಯೋಗಿಗಳನ್ನು ಲೇ ಆಫ್‌ ಮಾಡಲಾಗಿದೆ. ಬೆಳಗ್ಗೆ ಎಲ್ಲರಿಗೂ ವರ್ಕ್‌ ಫ್ರಮ್‌ ಹೋಮ್‌ ಘೋಷಣೆ ಮಾಡಿ ಸಂಜೆಯ ವೇಳೆಗೆ ನಿಮ್ಮನ್ನು ಕೆಲಸದಿಂದ ತೆಗೆಯಲಾಗಿದೆ ಎನ್ನುವ ಮೇಲ್‌ ಕಳಿಸಲಾಗಿದೆ.

ಆಫೀಸಿಗೆ ಬಂದ ಎಂಪ್ಲಾಯಿಗಳಿಗೆ, ಎಲ್ಲರಿಗೂ ಸಿಹಿ ಸುದ್ದಿ ಇದೆ, ಇನ್ನು ಅರ್ಜೆಂಟ್‌ನಲ್ಲಿ ಸರಿಯಾಗಿ ತಿಂಡಿಯೂ ತಿನ್ನದೇ ಆಫೀಸಿಗೆ ಓಡಿ ಬರೋದು ಬೇಕಿಲ್ಲ. ಇನ್ನು ಮನೆಯಲ್ಲೇ ಲಾಗಿನ್‌ ಆಗಿ ಕೆಲಸ ಮಾಡಿ ಎಂದು ಹೇಳಿದೆ. ಇದರಿಂದ ಖುಷಿ ಖುಷಿಯಲ್ಲಿ ಎಂಪ್ಲಾಯಿಗಳು ಮನೆ ಸೇರಿದ್ದಾರೆ. ಆದರೆ ಸಂಜೆಯಾಗುವುದರಲ್ಲೇ ಉದ್ಯೋಗಿಗಳಿಗೆ ಶಾಕ್‌ ಆಗಿದೆ.

ಮನೆಯಲ್ಲೇ ಆರಾಮಾಗಿರಿ, 8000 ಮಂದಿಯನ್ನು ಕೆಲಸದಿಂದ ತೆಗೆದಿದ್ದೇವೆ ಎನ್ನುವ ಮೇಲ್‌ ಬಂದಿದೆ. ಇದನ್ನು ನೋಡಿ ಉದ್ಯೋಗಿಗಳು ಗರಂ ಆಗಿದ್ದಾರೆ. ಕೆಲಸದಿಂದ ತೆಗೆಯುವುದೇ ಆಗಿದ್ದರೆ ಯಾಕೆ ವರ್ಕ್‌ ಫ್ರಮ್‌ ಹೋಮ್‌ ಎಂದು ಬೇಸರಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !