ಫೇಸ್‌ಬುಕ್ ಮಾತೃಸಂಸ್ಥೆ ‘ಮೆಟಾ’ಗೆ ಉಗ್ರವಾದಿ ಪಟ್ಟ ಕಟ್ಟಿದ ರಷ್ಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾಗೆ ರಷ್ಯಾ ಉಗ್ರವಾದಿ ಪಟ್ಟ ಕಟ್ಟಿದೆ. ತೀವ್ರಗಾಮಿ ಸಂಸ್ಥೆಯೆಂದು ರಷ್ಯಾ ಘೋಷಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಉಕ್ರೇನ್‌ಗೆ ಸಿಗುತ್ತಿರುವ ಬೆಂಬಲದಿಂದ ರಷ್ಯಾ ಅತೃಪ್ತಿ ಹೊಂದಿದೆ ಎನ್ನಲಾಗಿದೆ. ರಷ್ಯಾದ ಫೆಡರಲ್ ಸರ್ವೀಸ್ ಫಾರ್ ಫಿನಾನ್ಶಿಯಲ್ ಮಾನಿಟರಿಂಗ್ ಸಂಸ್ಥೆಯ ದತ್ತಾಂಶದಲ್ಲಿ ಈ ಅಂಶ ಕಂಡುಬಂದಿದೆ.

ರಷ್ಯಾದ ಸ್ಥಳೀಯ ನ್ಯಾಯಾಲಯವೊಂದು ಮೆಟಾ ಸಂಸ್ಥೆಯ ಒಡೆತನದಲ್ಲಿ ಇರುವ ಫೇಸ್‌ಬುಕ್ ಹಾಗೂ ಇನ್ಸ್‌ಟಾಗ್ರಾಂ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿತ್ತು. ಉಗ್ರವಾದಿ ಚಟುವಟಿಕೆಗಳನ್ನು ನಿರತವಾಗಿರುವ ಕಾರಣ ಬ್ಯಾನ್ ಮಾಡಲಾಗಿದೆ ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖವಾಗಿತ್ತು.

ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರಿಗೆ ರಷ್ಯಾ ಪ್ರವೇಶ ಕೂಡ ನಿರ್ಬಂಧ ಮಾಡಲಾಗಿತ್ತು. ಅವರಿಗಷ್ಟೇ ಅಲ್ಲ, ಇತರ 72 ಗಣ್ಯರಿಗೂ ನಿರ್ಬಂಧ ಹೇರಿತ್ತು.

ರಷ್ಯಾದ ಜನರ ವಿರುದ್ಧ ಹಿಂಸಾಚಾರ ಉತ್ತೇಜನೆಗೆ ಮೆಟಾ ಪ್ಲಾಟ್‌ಫಾರ್ಮ್‌ಗಳು ಬಳಕೆಯಾಗುತ್ತಿವೆ ಎಂದು ಮಾಸ್ಕೋ ನ್ಯಾಯಾಲಯ ತೀರ್ಪು ನೀಡಿದೆ. ಉಕ್ರೇನ್‌ನಲ್ಲಿ ಮೆಟಾ ಇದನ್ನು ಮಾಡುತ್ತಿದ್ದು, ಜನರ ಭಾವನೆ ಕೆರಳುತ್ತಿದೆ ಎಂದು ರಷ್ಯಾ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!