ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಯಾಗುತ್ತಲೇ ಇದೆ. ಅದೇ ರೀತಿ ಇಂದು ಕೂಡಾ ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಚೆನ್ನ-770ರೂ ಇಳಿದರೆ, ಬೆಳ್ಳಿ-600ರೂಪಾಯಿ ಕಡಿಮೆ ಆಗಿದೆ.

ಹಾಗಿದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ ಬೆಳ್ಳಿ ದರ ಹೇಗಿದೆ ನೋಡೋಣ ಬನ್ನಿ.

ನಿನ್ನೆಯ 22 ಕ್ಯಾರೆಟ್ ಚಿನ್ನದ ಬೆಲೆ 47,600 ರೂ. ಇತ್ತು. ಇಂದು 46,900 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,930 ರೂ.ಇಂದು 51,160 ರೂ. ಇಳಿದಿದೆ. ಗುಡ್ ರಿಟರ್ನ್ಸ್​ ವರದಿ ಪ್ರಕಾರ, 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಬೆಂಗಳೂರು- 46,950 ರೂ, ಮಂಗಳೂರು- 46,950 ರೂ, ಮೈಸೂರು- 46,950 ರೂ. ದೆಹಲಿ- 47,050 ರೂ, ಹೈದರಾಬಾದ್- 46,900 ರೂ, ಚೆನ್ನೈ- 47,400 ರೂ. ಕೇರಳ- 46,900 ರೂ, ಕೊಲ್ಕತ್ತಾ- 46,900 ರೂ, ಪುಣೆ- 46,930 ರೂ, ಮುಂಬೈನಲ್ಲಿ- 46,900 ರೂ,ನಷ್ಟಿದೆ.

ಅದೇ ರೀತಿ, 24 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ: ಬೆಂಗಳೂರು- 51,220 ರೂ, ಮಂಗಳೂರು- 51,220 ರೂ, ಮೈಸೂರು- 51,220 ರೂ. ಹೈದರಾಬಾದ್- 51,160 ರೂ, ಚೆನ್ನೈ- 51,710 ರೂ, ಮುಂಬೈ- 51,160 ರೂ, ದೆಹಲಿ- 52,330 ರೂ, ಕೊಲ್ಕತ್ತಾ- 51,160 ರೂ,  ಕೇರಳ- 51,160 ರೂ, ಪುಣೆ- 51,190 ರೂಪಾಯಿಯಾಗಿದೆ.

ಬೆಳ್ಳಿ ದರ: ಬೆಳ್ಳಿ ದರ ಇಂದು 600 ರೂ. ಕುಸಿತವಾಗೊಂಡಿದ್ದು, ನಿನ್ನೆ 1 ಕೆಜಿ ಬೆಳ್ಳಿ ಬೆಲೆ 59,500 ರೂ. ಇತ್ತು ಇಂದು 58,900 ರೂಪಾಯಿಯಾಗಿದೆ. ಬೆಂಗಳೂರು- 64,000 ರೂ, ಮೈಸೂರು- 64,000 ರೂ., ಮಂಗಳೂರು- 64,000 ರೂ., ಮುಂಬೈ- 58,900 ರೂ, ಚೆನ್ನೈ- 64,000 ರೂ, ದೆಹಲಿ- 58,900 ರೂ, ಹೈದರಾಬಾದ್- 64,000 ರೂ, ಕೊಲ್ಕತ್ತಾ- 58,900 ರೂ. ಇಳಿಕೆ ಕಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!