ಮತ್ತೆ 10 ಸಾವಿರ ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಲಿದೆ ಫೇಸ್ಬುಕ್‌ ಮಾತೃಸಂಸ್ಥೆ ಮೆಟಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ವರ್ಷವಷ್ಟೇ ಜಾಗತಿಕ ಟೆಕ್ ಕ್ಷೇತ್ರದ ಅತಿ ದೊಡ್ಡ ಉದ್ಯೋಗ ಕಡಿತ ನಡೆಸಿದ್ದ ಫೆಸ್ಬುಕ್‌ ಮಾತೃಸಂಸ್ಥೆ ಮೆಟಾ ಇದೀಗ ಮತ್ತೊಮ್ಮೆ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ. 2022ರ ನವೆಂಬರ್‌ ತಿಂಗಳಿನಲ್ಲಿ ಮೆಟಾವು ಬರೋಬ್ಬರಿ 11 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಿತ್ತು. ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದಾಗಿ ಇದೀಗ ಮತ್ತೊಮ್ಮೆ ಉದ್ಯೋಗ ಕಡಿತಕ್ಕೆ ಮೆಟಾ ಮುಂದಾಗಿದೆ.

ಮುಂಬರುವ ಏಪ್ರಿಲ್‌ ಹಾಗು ಮೇ ತಿಂಗಳಲ್ಲಿ ಉದ್ಯೋಗ ಕಡಿತಗಳು ಸಂಭವಿಸಲಿದ್ದು ನೇಮಕಾತಿ ತಂಡ, ಟೆಕ್‌ ಗುಂಪು ಹಾಗು ವ್ಯಾಪಾರ ಗುಂಪುಗಳಲ್ಲಿ ಕಡಿತಗಳು ಸಂಭವಿಸಲಿವೆ. “ಇದು ಅತ್ಯಂತ ಕಠಿಣವಾದ ಕೆಲಸ. ಆದರೆ ಇದನ್ನು ಮಾಡದೇ ಬೇರೆ ಯಾವುದೇ ಮಾರ್ಗವಿಲ್ಲ” ಎಂದು ಕಂಪನಿಯ ಸಿಇಒ ಮಾರ್ಕ್‌ಜುಕರ್‌ಬರ್ಗ್‌ ಹೇಳಿದ್ದಾರೆ.

ಫೆಬ್ರವರಿಯಲ್ಲಿ ಮೆಟಾವು ಅತ್ಯಂತ ಕಡಿಮೆ ತ್ರೈಮಾಸಿಕ ಲಾಭವನ್ನು ವರದಿ ಮಾಡಿತ್ತು. ಆನ್‌ಲೈನ್ ಜಾಹೀರಾತು ಮಾರುಕಟ್ಟೆಯಲ್ಲಿನ ಕುಸಿತ ಮತ್ತು ಟಿಕ್‌ಟಾಕ್‌ನಂತಹ ಪ್ರತಿಸ್ಪರ್ಧಿಗಳ ಸ್ಪರ್ಧೆಯಿಂದ ಕಂಪನಿಗೆ ನಷ್ಟವುಂಟಾಗಿತ್ತು. ಹೀಗಾಹಿ ಹೆಚ್ಚಿನ ದಕ್ಷತೆಗೆ ಗಮನ ಹರಿಸುತ್ತಿರುವುದಾಗಿ ಜುಕರ್‌ಬರ್ಗ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!