ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ನಿಷೇಧಹೊಂದಿದ್ದರೂ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿರುವ ಟಿಕ್-ಟಾಕ್ ಅನ್ನು ಮಣಿಸಲು ಫೇಸ್ಬುಕ್ ಹೊಸ ತಂತ್ರವೊಂದನ್ನು ರೂಪಿಸುತ್ತಿದೆ ಎನ್ನಲಾಗಿದೆ.
2020ರಲ್ಲಿ ಟಿಕ್ ಟಾಕ್ ಗೆ ಪ್ರತಿಯಾಗಿ ಇನ್ಸ್ಟಾಗ್ರಾಮ್ ರೀಲ್ಸ್ ಪರಿಚಯಿಸಲಾಯಿತು ಅದೂ ಕೂಡ ಹೆಚ್ಚು ಜನಪ್ರಿಯವಾದರೂ ಟಿಕ್-ಟಾಕನ್ನು ಮಣಿಸಲು ಸಾಧ್ಯವಾಗಲಿಲ್ಲ. ಫೇಸ್ಬುಕ್ ಕೂಡ ʼಶಾರ್ಟ್ ವೀಡಿಯೋʼಗಳನ್ನು ಪರಿಚಯಿಸಿದ್ದರೂ ಅದು ಅಷ್ಟೊಂದು ಜನಪ್ರಿಯವಾಗಿಲ್ಲ. ಸೆನ್ಸಾರ್‌ಟವರ್ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ 2022ರ ಮೊದಲ ತ್ರೈಮಾಸಿಕದಲ್ಲಿ ಟಿಕ್‌ಟಾಕ್ ಹೆಚ್ಚು ಡೌನ್‌ಲೋಡ್ ಆಗಿದ್ದು, ಅತಿ ಹೆಚ್ಚು ಗಳಿಕೆ ಮಾಡಿದ ಅಪ್ಲಿಕೇಶನ್ ಆಗಿದೆ. ಆ ಕಾರಣದಿಂದ ಟಿಕ್‌ಟಾಕ್‌ಗೆ ಪ್ರತಿಯಾಗಿ ತನ್ನ ಅಲ್ಗಾರಿದಮ್ ಹೊಂದಿಸಲು ಫೇಸ್ಬುಕ್ ಯೋಚಿಸುತ್ತಿದೆ ಎನ್ನಲಾಗಿದೆ.
ಈ ಕುರಿತು ಮೆಮೋವೊಂದು ಸೋರಿಕೆಯಾಗಿದೆ ಎನ್ನಲಾಗಿದ್ದು ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಇದರ ಪ್ರಕಾರ ಮೆಟಾ ಮಾಲೀಕತ್ವದ ಫೇಸ್ಬುಕ್‌ನ ಮುಖ್ಯಸ್ಥ ಟಾಮ್ ಅಲಿಸನ್ ಫೇಸ್ಬುಕ್ ಅಪ್ಲಿಕೇಷನ್ ನಲ್ಲಿರುವ “ಫಾರ್ ಯೂ” ಸೆಕ್ಷನ್ ನಲ್ಲಿ ಹೆಚ್ಚು ವೈಯುಕ್ತೀಕರಿಸಿದ ವೀಡಿಯೋ ಶೀಪಾರಸ್ಸು ಮಾಡಲು ಕಂಪನಿಯ ಡಿಸ್ಕವರಿ ಇಂಜಿನ್ ಗೆ ಹೇಳಿದ್ದಾರೆ ಎನ್ನಲಾಗಿದೆ. ಗ್ರಾಹರಿಗೆ ಸಂಬಂಧವಿಲ್ಲದ ಆದರೆ ಆವರನ್ನು ಹಿಡಿದಿಡಬಲ್ಲಂಥಹ ಶಾರ್ಟ್ ವೀಡಿಯೋಗಳನ್ನು ತೋರಿಸುವಂತೆ ಅಲ್ಗಾರಿದಮ್ ಸೆಟ್ ಮಾಡುವಂತೆ ಚಿಂತಿಸಲಾಗುತ್ತಿದೆ.