Tuesday, March 28, 2023

Latest Posts

SERVER DOWN | ಒಟ್ಟಿಗೇ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್, ಇನ್ಸ್ಟಾಗ್ರಾಮ್ ಡೌನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಕಕಾಲಕ್ಕೆ ಮೆಟಾ ಒಡೆತನದ ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಸರ್ವರ್ ಡೌನ್ ಆಗಿದೆ.

ಸಾವಿರಾರು ಬಳಕೆದಾರರು ಸಮಸ್ಯೆ ಎದುರಿಸಿದ್ದು, ನಿಧಾನವಾಗಿ ಸಮಸ್ಯೆ ಸರಿಪಡಿಸಲಾಗುತ್ತಿದೆ. ಎಲ್ಲ ಬಳಕೆದಾರರಿಗೂ ಈ ಸಮಸ್ಯೆ ಎದುರಾಗಿಲ್ಲ, ಕೆಲ ಬಳಕೆದಾರರಿಗೆ ಮಾತ್ರ ಸರ್ವರ್ ಡೌನ್ ಸಮಸ್ಯೆ ಕಾಣಿಸಿದೆ ಎನ್ನಲಾಗಿದೆ.

ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಾಕಷ್ಟು ಬಳಕೆದಾರರು ದೂರು ನೀಡಿದ್ದಾರೆ. ಟ್ವೀಟ್‌ಡೆಕ್ ಕೂಡ ಕಾರ್ಯನಿರ್ವಹಿಸುತ್ತಿಲ್ಲ, ವಾಟ್ಸಾಪ್ ಬಿಟ್ಟು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಸಮಸ್ಯೆ ಇದೆ ಎಂದು ಕೆಲ ಬಳಕೆದಾರರು ಹೇಳಿದ್ದಾರೆ.

ಯುಎಸ್‌ನ ಹೆಚ್ಚಿನ ಮಂದಿ ಸಮಸ್ಯೆ ಎದುರಿಸಿದ್ದಾರೆ, ಯೂಟ್ಯೂಬ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಲವರು ಹೇಳಿದ್ದು, ಟ್ವಿಟರ್ ಲಾಗಿನ್ ಸಮಸ್ಯೆಯಾಗಿದೆ ಎಂದು ಕೆಲವರು ದೂರಿದ್ದಾರೆ. ಇದನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಕಂಪನಿ ಹೇಳಿದೆ.

ಬುಧವಾರ ರಾತ್ರಿ ಸಮಸ್ಯೆ ಕಾಣಿಸಿದ್ದು, ಟ್ವೀಟ್ ಮಾಡುವವರಿಗೆ, ಟ್ವೀಟ್ ದಿನಮಿತಿ ಮೀರಿದ್ದೀರಿ, ಟ್ವೀಟ್ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಸಂದೇಶ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!