ವಿವಾದಗಳನ್ನು ಎದುರಿಸಿ ಶೋಯಬ್‌ರನ್ನು ವರಿಸಿದ್ರು ಸಾನಿಯಾ! ದಾಂಪತ್ಯದಲ್ಲಿ ಆಗಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

14 ವರ್ಷಗಳ ಸುಂದರ ದಾಂಪತ್ಯಕ್ಕೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟಿಗ ಶೋಯಬ್ ಮಲಿಕ್ ಗುಡ್‌ಬೈ ಹೇಳಿದ್ದಾರೆ.

Sania Mirza-Shoaib Malik Going To Separate? Speculations Intensifies With  Their Social Media Postsಕೆಲ ದಿನಗಳ ಹಿಂದಷ್ಟೇ ಸಾನಿಯಾ ಡಿವೋರ್ಸ್ ಕೂಡ ಕಷ್ಟ, ಮದುವೆಯೂ ಕಷ್ಟ ಎಂದು ಹೇಳಿಕೊಂಡಿದ್ದರು. ಡಿವೋರ್ಸ್ ವದಂತಿ ಇದ್ದರೂ ಇಬ್ಬರೂ ಈ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಇಂದು ಶೋಯಬ್ ನಟಿ ಸನಾ ಜಾವೇದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Sania Mirza took divorce from husband Shoaib Malik: Pakistan media | Latest  News India - Hindustan Times2010 ರಲ್ಲಿ ಶೋಯಬ್-ಸಾನಿಯಾ ಮದುವೆಯಾಗಿದ್ದರು. ಭಾರತದ ಟೆನಿಸ್ ತಾರೆ ಪಾಕಿಸ್ತಾನಿ ಕ್ರಿಕೆಟರ್‌ನ್ನು ಮದುವೆಯಾಗುವ ವಿಷಯ ಭಾರತದ ಎಷ್ಟೋ ಜನರಿಗೆ ಹಿಡಿಸಿರಲಿಲ್ಲ. ಅಲ್ಲಲ್ಲಿ ಸಣ್ಣಪುಟ್ಟ ಪ್ರತಿಭಟನೆಗಳನ್ನೂ ಜನ ಮಾಡಿದ್ದರು.

Husband to Superwoman': Shoaib Malik's Instagram bio remains intact amid  Sania Mirza divorce rumours - BusinessTodayಫೇವರೆಟ್ ಟೆನಿಸ್ ತಾರೆ ಲಿಸ್ಟ್‌ನಿಂದ ಸಾನಿಯಾರನ್ನು ಕಿತ್ತು ಹಾಕಿದ್ರು. ಆದರೂ ಸಾನಿಯಾ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇನ್ನು ಮದುವೆಗೆ ಕೆಲವೇ ದಿನಗಳು ಬಾಕಿ ಇದ್ದಾಗ ಆಯೆಷಾ ಎನ್ನುವ ಮಹಿಳೆ ಶೋಯಬ್ ತನ್ನ ಪತಿ ಎಂದು ಸೀನ್ ಕ್ರಿಯೇಟ್ ಮಾಡಿದ್ದರು.

Sania Mirza Shares Cryptic Post Amid Divorce Rumours With Shoaib Malik -  Pragativadiಈ ಸಮಸ್ಯೆಯನ್ನೂ ಡೀಲ್ ಮಾಡಿ ನಂತರ ಸಾನಿಯಾ ಶೋಯಬ್‌ರನ್ನು ಮದುವೆಯಾಗಿದ್ದರು. ಇವರಿಗೆ ಮುದ್ದಾದ ಗಂಡು ಮಗು ಇದೆ. ಮಗ ಹುಟ್ಟಿದ ನಂತರ ದಂಪತಿಯಲ್ಲಿ ಕರಿಯರ್‌ಗೆ ಸಂಬಂಧಿಸಿದಂತೆ ಆಗಾಗ ಮಾತುಕತೆಗಳಾಗಿವೆ ಎನ್ನಲಾಗಿದೆ.

Shoaib Malik's heartfelt post for Sania Mirza on birthday amid divorce  rumours | Cricket - Hindustan Timesಇತ್ತೀಚೆಗೆ ಸಾನಿಯಾ ಶೋಯಬ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಮಗನ ಹುಟ್ಟುಹಬ್ಬಕ್ಕೆ ಮತ್ತೆ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡಾಗ ಡಿವೋರ್ಸ್ ವದಂತಿ ಸುಳ್ಳು ಎಂದು ಜನರು ಸುಮ್ಮನಾಗಿದ್ದರು.

Shoaib Malik cheated on Sania Mirza, says Pakistan media; star couple  thinking of separation after 12 years of marriage : The Tribune Indiaಅದಾದ ನಂತರ ಇಂದು ಸೀದ ಶೋಯಬ್ ತನ್ನ ಎರಡನೇ ವಿವಾಹದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!