ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅತಿಯಾದರೆ ಅಮೃತವೂ ವಿಷ. ನೀವು ಪಪ್ಪಾಯಿ ಹಣ್ಣುಗಳನ್ನು ಅತಿಯಾಗಿ ಬಳಸಿದರೆ, ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.
ದಿನಕ್ಕೆ ಒಂದಕ್ಕಿಂತ ಹೆಚ್ಚು ಪಪ್ಪಾಯಿಯನ್ನು ಸೇವಿಸಬೇಡಿ. ಹೆಚ್ಚು ಪಪ್ಪಾಯಿ ತಿನ್ನುವುದು ನಿಮ್ಮ ಗಂಟಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪಪ್ಪಾಯಿಯು ಗರ್ಭಾಶಯವನ್ನು ಸಂಕುಚಿತಗೊಳಿಸುತ್ತದೆ. ಆದ್ದರಿಂದ, ಗರ್ಭಿಣಿಯರು ಪಪ್ಪಾಯಿ ತಿನ್ನುವುದನ್ನು ತಪ್ಪಿಸಬೇಕು. ಪಪ್ಪಾಯಿಯು ಗರ್ಭಪಾತವನ್ನು ಉಂಟುಮಾಡುತ್ತದೆ.
ಕೇವಲ ಗರ್ಭಿಣಿಯರಷ್ಟೇ ಅಲ್ಲ, ಹೆರಿಗೆಯಾದ ಕೆಲವು ದಿನಗಳವರೆಗೆ ಪಪ್ಪಾಯಿಯನ್ನು ತಿನ್ನಬಾರದು. ಪಪ್ಪಾಯಿಯಲ್ಲಿರುವ ಪಪೈನ್ ಎಂಬ ವಿಷಕಾರಿ ಅಂಶ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.