ಇದೆಂಥಾ ವೈರಸ್‌? ಜನರ ತಲೆ ಕೂದಲನ್ನು ಉದುರಿಸಿ ಬೋಳು ಮಾಡುತ್ತಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಹಾರಾಷ್ಟ್ರದ ಹಲವು ಹಳ್ಳಿಗಳಿಗೆ ವೈರಸ್​ವೊಂದು ಹರಡಿದ್ದು, ಜನರ ಕೂದಲು ಉದುರಿಸಿ ಬೋಳು ಮಾಡುತ್ತಿದೆ. ಇದರಿಂದ ಜನ ಹೆದರಿದ್ದಾರೆ.

ಈ ಅಪರಿಚಿತ ವೈರಸ್​ನಿಂದ ಮೂರೇ ಮೂರು ದಿನದಲ್ಲಿ ಕೂದಲು ಸಂಪೂರ್ಣವಾಗಿ ಉದುರಿ ತಲೆ ಬೋಳಾಗುತ್ತಿದೆ. ಬೋಂಡಗಾಂವ, ಕಳವಾಡ, ಹಿಂಗಾಣ ಗ್ರಾಮಗಳಲ್ಲಿ ಅಪರಿಚಿತ ವೈರಸ್ ಹರಡಿದ್ದು, ಕುಟುಂಬಗಳು ಈ ವೈರಸ್ ಗೆ ಬಲಿಯಾಗುತ್ತಿದ್ದು, ಇದರಿಂದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಈ ಕೂದಲು ಉದುರುವಿಕೆ ಮತ್ತು ಬೋಳು ಸಮಸ್ಯೆಯಿಂದ ಮುಕ್ತಿ ಪಡೆಯಲು ಅನೇಕ ನಾಗರಿಕರು ಖಾಸಗಿ ಆಸ್ಪತ್ರೆಗಳಿಗೆ ಧಾವಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಗ್ರಾಮದ ನಿವಾಸಿಗಳು ಬೋಳು ಸಮಸ್ಯೆ ಎದುರಿಸುತ್ತಿದ್ದು, ಮಹಿಳೆಯರೂ ಇದರಿಂದ ಪಾರಾಗಿಲ್ಲ. ಆದರೆ ಇದು ಏಕೆ ನಡೆಯುತ್ತಿದೆ ಎಂಬುದಕ್ಕೆ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ.

ಈ ವಿಚಿತ್ರ ರೀತಿಯ ಕೂದಲು ಉದುರುವಿಕೆ ಪುರುಷರಲ್ಲಿ ಮಾತ್ರವಲ್ಲದೆ ಮಹಿಳೆಯರಲ್ಲಿಯೂ ಕಂಡುಬರುತ್ತದೆ. ನೂರಾರು ಮಹಿಳೆಯರು, ಪುರುಷರು ತಮ್ಮ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಕಲುಷಿತ ಅಥವಾ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಲವಣಗಳು ಕೂದಲು ಉದುರುವಿಕೆಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!