ಇಡೀ ಪ್ರಪಂಚದಲ್ಲಿ ನೆಲ್ಲಿಕಾಯಿಯಲ್ಲಿ ಇರುವಷ್ಟು ವಿಟಮಿನ್ ಸಿ ಅಂಶ ಯಾವ ಆಹಾರ ಪದಾರ್ಥದಲ್ಲೂ ಇಲ್ಲ.
ನೆಲ್ಲಿಕಾಯಿಯನ್ನು ಉಪ್ಪು ಸಿಂಪಡಿಸಿ ತಿನ್ನುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಜ್ವರ, ನೆಗಡಿ, ತಲೆನೋವು, ಹಿಮ್ಮಡಿ ಒಡೆದು, ಅಜೀರ್ಣ, ವಾತ, ಕಫ, ಪಿತ್ತ ಇವು ಸಾಮಾನ್ಯ.
ಹಾಗಾದರೆ ದಿನನಿತ್ಯದ ಆಹಾರದಲ್ಲಿ ನೆಲ್ಲಿಕಾಯಿಯನ್ನು ಬಳಸುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನೆಲ್ಲಿಕಾಯಿಯನ್ನು ಆಹಾರಕ್ಕಾಗಿ, ಪಾನೀಯವಾಗಿ, ಜಾಮ್ ರೂಪದಲ್ಲಿ ಮತ್ತು ಉಪ್ಪಿನಕಾಯಿಯಾಗಿ ಸೇವಿಸಬಹುದು.